janadhvani

Kannada Online News Paper

SSLC: ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ಫಾತಿಮಾ ತ್ವಯ್ಯಿಬಾ

ಬೆಳ್ತಂಗಡಿ: ಇಲ್ಲಿನ ಉಪ್ಪಿನಂಗಡಿ, ಕರಾಯ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಫಾತಿಮಾ ತ್ವಯ್ಯಿಬಾ 592 ಅಂಕಗಳನ್ನು ಗಳಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ.

ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿರುವ ತ್ವಯ್ಯಿಬಾ, ಕರಾಯ ಶಾಲೆಗೆ ಕೀರ್ತಿ ತಂದಿರುತ್ತಾರೆ.

ಇವರು ಕಲ್ಲೇರಿ, ಬೋವು ಹುಸೈನ್ ಮುಸ್ಲಿಯಾರ್ ಮತ್ತು ನೂರ್ ಜಹಾನ್ ದಂಪತಿಗಳ ಪುತ್ರಿಯಾಗಿದ್ದು, ಕುಟುಂಬಸ್ಥರು,ಊರವರು, ಅಧ್ಯಾಪಕ ವೃಂದ ಮತ್ತು ಹಿರಿಯರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮುಂದಕ್ಕೆ ಶರೀಅತ್(ಧಾರ್ಮಿಕ ಜ್ಞಾನ) ಕರಗತ ಮಾಡಿಕೊಂಡು ಅಧ್ಯಾಪಕಿಯಾಗುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.