ನವದೆಹಲಿ: ವಿಶ್ವಾದ್ಯಂತ 3,123 ಮಂದಿಯನ್ನು ಮಾರಕ ಕೊರೊನಾ ವೈರಸ್ ತನ್ನ ಮೃತ್ಯುಕೂಪಕ್ಕೆ ಸೆಳೆದುಕೊಂಡಿದ್ದು, ಸೋಂಕು ತಗುಲಿದವರ ಸಂಖ್ಯೆ 90 ಸಾವಿರ ಗಡಿಯನ್ನು ದಾತ್ತಿದೆ.
ಚೀನಾದಲ್ಲಿ ಸ್ಫೋಟಗೊಂಡ ದಿನದಿಂದ ಮರಣ ಮೃದಂಗ ಮುಂದುವರಿಸಿರುವ ಕೊರೊನಾ ವೈರಸ್ ಚೀನಾದಲ್ಲೇ 2,981 ಮಂದಿಯನ್ನು ಬಲಿ ಪಡೆದುಕೊಂಡಿದೆ. ಹೊಸದಾಗಿ 38 ಸಾವಿನ ಪ್ರಕರಣಗಳು ಬುಧವಾರ ವರದಿಯಾಗಿದೆ. ಒಟ್ಟು 80,270 ಮಂದಿಗೆ ಸೋಂಕು ಇರುವುದಾಗಿ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್ಎಚ್ಸಿ) ಮಾಹಿತಿ ನೀಡಿದೆ. ಇನ್ನು ವಿಶ್ವಾದ್ಯಂತ 3123 ಸಾವಾಗಿದ್ದು, 91,783 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.
ಮಂಗಳವಾರ ಹೊಸದಾಗಿ ಚೀನಾದಲ್ಲಿ 119 ಮಂದಿಗೆ ಸೋಂಕು ತಗುಲಿದೆ. ವೈರಸ್ ಮೊದಲಿಗೆ ಸ್ಫೋಟಗೊಂಡ ಹುಬೇ ಪ್ರಾಂತ್ಯದ ವುಹಾನ್ನಲ್ಲೇ 115 ಪ್ರಕರಣಗಳು ಕಂಡುಬಂದಿದ್ದು, ಹುಬೇ ಹೊರತುಪಡಿಸಿ ಹೊರಭಾಗದಲ್ಲಿ ಕೇವಲ 4 ಪ್ರಕರಣಗಳು ಪತ್ತೆಯಾಗಿದೆ. ಉಳಿದ ಭಾಗಗಳಲ್ಲಿ ವೈರಸ್ ತಗುಲಿದವರ ಸಂಖ್ಯೆ ಕ್ಷೀಣಿಸಿದೆ ಎಂದು ಎನ್ಎಚ್ಸಿ ಹೇಳಿದೆ.
ಹೊಸದಾಗಿ ಪತ್ತೆಯಾಗಿರುವ 38 ಸಾವಿನ ಪ್ರಕರಣಗಳಲ್ಲಿ 37 ಪ್ರಕರಣಗಳು ಹುಬೇ ಒಂದರಲ್ಲಿ ವರದಿಯಾಗಿದೆ. ಮತ್ತೊಂದು ಸಾವಿನ ಪ್ರಕರಣ ಚೀನಾದ ಸ್ವಾಯತ್ತ ವಲಯ ಮಂಗೊಲಿಯಾ ವರದಿಯಾಗಿದೆ ಎಂದು ಎನ್ಎಚ್ಸಿ ತಿಳಿಸಿದೆ. ಇದಲ್ಲದೆ, ಮಂಗಳವಾರ 143 ನೂತನ ಶಂಕಿತ ಪ್ರಕರಣ ವರದಿಯಾಗಿದೆ. ಒಟ್ಟಾರೆ ದೇಶದಲ್ಲಿ 520 ಶಂಕಿತ ಪ್ರಕರಣಗಳಿವೆ ಎಂದು ಎನ್ಎಚ್ಸಿ ಮಾಹಿತಿ ನೀಡಿದೆ.
ಮಂಗಳವಾರ ತುಂಬಾ ಗಂಭೀರವಾದ ಕೊರೊನಾ ವೈರಸ್ ಪ್ರಕರಣ 6,416 ರಿಂದ 390ಕ್ಕೆ ಕುಸಿದೆ. ಅದರಲ್ಲಿ 2,652 ಮಂದಿ ಗುಣಮುಖವಾದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 27,433 ಮಂದಿ ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೂ 49,856 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ಚೀನಾ ಹೊರತು ಪಡಿಸಿ ಮಂಗಳವಾರ ಅಂತ್ಯದ ವೇಳೆಗೆ ಎರಡು ಸಾವಿನ ಪ್ರಕರಣ ಸೇರಿ 100 ಕೊರೊನಾ ಸೋಂಕು ಪ್ರಕರಣ ಹಾಂಕಾಂಗ್ನಲ್ಲಿ ವರದಿಯಾಗಿದೆ. ಮಕಾವೋ ಸಾರ್ದಲ್ಲಿ 10 ಹಾಗೂ ತೈವಾನ್ನಲ್ಲಿ ಒಂದು ಸಾವು ಸೇರಿ 42 ಪ್ರಕರಣ ಪತ್ತೆಯಾಗಿದೆ.
ದಕ್ಷಿಣ ಕೊರಿಯಾದಲ್ಲಿ 142 ಹೊಸ ಪ್ರಕರಣಗಳು ಸೇರಿ ಒಟ್ಟು 5,328 ಸೋಂಕು ಪ್ರಕರಣ ವರದಿಯಾಗಿದೆ. ವೈರಸ್ನಿಂದ 32 ಮಂದಿ ಸಾವಿಗೀಡಾಗಿದ್ದಾರೆ. ಭಾರತದಲ್ಲಿ ರಾಜಸ್ಥಾನದಲ್ಲಿರುವ ಇಟಲಿ ದಂಪತಿ ಸೇರಿ 6 ಮಂದಿಗೆ ವೈರಸ್ ತಗುಲಿದೆ. ಇಟಲಿಯಲ್ಲಿ ಸಾವಿನ ಸಂಖ್ಯೆ 79ಕ್ಕೇರಿದ್ದು, 2502 ಮಂದಿಗೆ ಸೋಂಕು ತಗುಲಿದೆ. ಇರಾನ್ನಲ್ಲಿ 77 ಮಂದಿ ಮೃತರಾಗಿದ್ದು, 2,336 ಮಂದಿಗೆ ಸೋಂಕಿದೆ. ಜಪಾನ್ನಲ್ಲಿ 12 ಸಾವಿನೊಂದಿಗೆ 1000 ಮಂದಿಗೆ ವೈರಸ್ ತಗುಲಿದೆ.
ಅಮೆರಿಕದಲ್ಲಿ ಏಳು ಮಂದಿ ಮೃತಪಟ್ಟಿದ್ದು, 100 ಮಂದಿಗೆ ವೈರಸ್ ತಗುಲಿದೆ. ಯುಕೆಯಲ್ಲಿ 39 ಮಂದಿಗೆ ಸೋಂಕಿದೆ. ಫ್ರಾನ್ಸ್ನಲ್ಲಿ 21 ಹೊಸ ಪ್ರಕರಣ ಸೇರಿ 212 ಮಂದಿಗೆ ಕೊರೊನಾ ವೈರಸ್ ಸೋಂಕಿದ್ದು, 4 ಮಂದಿ ಸಾವಿಗೀಡಾಗಿದ್ದಾರೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ