ನವದೆಹಲಿ: ಸೌದಿ ಅರೇಬಿಯಾದ ಭಾರತೀಯ ಕಾರ್ಮಿಕರ ಸಂಖ್ಯೆಯಲ್ಲಿ ಆರು ಲಕ್ಷದಷ್ಟು ಕೊರತೆ ಕಂಡುಬಂದಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ. ಕಾರ್ಮಿಕರ ಸಂಖ್ಯೆಯಲ್ಲಿನ ಕುಸಿತಕ್ಕೆ ಅಲ್ಲಿನ ಸ್ವದೇಶೀಕರಣ ಮತ್ತು ವಿವಿಧ ಶುಲ್ಕಗಳು ಕಾರಣ ಎನ್ನಲಾಗಿದೆ.
ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಭಾರತೀಯ ವಿದೇಶಾಂಗ ಸಹಸಚಿವ ಮುರಳೀಧರನ್ ನೀಡಿದ ಉತ್ತರದಲ್ಲಿ ಈ ಅಂಕಿಅಂಶಗಳನ್ನು ನೀಡಲಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಭಾರತೀಯರಿರುವ ದೇಶವಾಗಿದೆ ಸೌದಿ. ಅಂಕಿಅಂಶಗಳ ಪ್ರಕಾರ ಅಲ್ಲಿರುವ ವಲಸಿಗರ ಜನಸಂಖ್ಯೆ 26 ಲಕ್ಷಕ್ಕೆ ಹತ್ತಿರದಲ್ಲಿದೆ.
2017ರ ಸೆಪ್ಟೆಂಬರ್ನಲ್ಲಿ, ಭಾರತೀಯರ ಜನಸಂಖ್ಯೆಯು ಮೂವತ್ತೆರಡುವರೆ ಲಕ್ಷವಾಗಿತ್ತು. ಮೂರು ವರ್ಷಗಳ ನಂತರ ಆರು ಲಕ್ಷದ ಕುಸಿತ ಕಂಡುಬಂದಿದೆ. ವಿಶ್ವದಾದ್ಯಂತ 203 ದೇಶಗಳಲ್ಲಿ ಭಾರತೀಯರು ಕೆಲಸ ಮಾಡುತ್ತಾರೆ ಎಂದು ಮುರಳೀಧರನ್ ಲೋಕಸಭೆಗೆ ಮಾಹಿತಿ ನೀಡಿದರು.
ಸೌದಿ ಅರೇಬಿಯಾದಲ್ಲಿ 25,94,947 ಭಾರತೀಯರಿದ್ದು, ಅಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ವಿದೇಶಿ ಕಾರ್ಮಿಕರು ಮತ್ತು ಅವಲಂಬಿತರಿಗೆ ಲೆವಿ, ಉದ್ಯೋಗ ವಲಯದಲ್ಲಿ ಸ್ವದೇಶೀಕರಣ, ಮಹಿಳೆಯರ ಸಬಲೀಕರಣದಿಂದಾಗಿ ಉದ್ಯೋಗ ಕಳಕೊಂಡ ಅನೇಕರು ಊರಿಗೆ ಮರಳಿದ್ದಾರೆ. ಈ ಬದಲಾವಣೆ ಮೂರು ವರ್ಷಗಳಲ್ಲಿ ಕಂಡುಬಂದಿದ್ದು, ಭಾರತೀಯ ಕಾರ್ಮಿಕರ ಸಂಖ್ಯೆಯಲ್ಲಿ ತೀವ್ರ ಕುಸಿತಕ್ಕೆ ಇದು ಕಾರಣ ಎಂದು ಅಂದಾಜಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು
ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿ ಖಂಡನೀಯ: ತೆಲಂಗಾಣ ಸಿಎಂಗೆ ಎ ಪಿ ಉಸ್ತಾದ್ ಪತ್ರ
ಲಂಚ: ಮೇಘಾ ಇಂಜಿನಿಯರಿಂಗ್ ವಿರುದ್ಧ ಸಿಬಿಐ ಪ್ರಕರಣ – 966 ಕೋಟಿ ಮೌಲ್ಯದ ಎಲೆಕ್ಟೋರಲ್ ಬಾಂಡ್ಗಳನ್ನು ಖರೀದಿಸಿದ್ದ ಕಂಪನಿ ಮೇಘಾ
ಸಮಗ್ರ ಅಭಿವೃದ್ಧಿ ಗೆ ಅಂಬೇಡ್ಕರ್ ತತ್ವ ಪಾಲನೆ ಅಗತ್ಯ : ದ್ರೌಪದಿ ಮುರ್ಮು
ಹರಿಯಾಣ : ಶಾಲಾ ಬಸ್ ಪಲ್ಟಿ; ಆರು ಮಕ್ಕಳು ಸಾವು ಈದ್ ರಜೆಯಲ್ಲೂ ತೆರೆದಿದ್ದ ಶಾಲೆ!
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಂ 2ಬಿ ಮೀಸಲು ರದ್ಧತಿ ಮತಬ್ಯಾಂಕ್ ಭದ್ರಪಡಿಸುವ ಸರಕಾರದ ನಡೆ ಖಂಡನೀಯ- ಎಸ್ ವೈ ಎಸ್
ದೇವಸ್ಥಾನಕ್ಕೆ ಮಾಂಸ ಎಸೆದು, ಕೋಮುಗಲಭೆ- ಪ್ರಮುಖ ಆರೋಪಿ ಚಂಚಲ್ ತ್ರಿಪಾಠಿ ಬಂಧನ