ರಿಯಾದ್; ಕೆಸಿಎಫ್ ರಿಯಾದ್ ಝೋನ್ ವತಿಯಿಂದ ಸ್ನೇಹ ಸಂಗಮ 2019 ಕಾರ್ಯಕ್ರಮ ನಡೆಯಿತು.

ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷರಾದ ಫಾರೂಕ್ ಸಅದಿ ಮತ್ತು ಎಜ್ಯುಕೇಶನ್ ವಿಭಾಗ ಅಧ್ಯಕ್ಷರಾದ ಇಲ್ಯಾಸ್ ಲತೀಫಿ, ರಶೀದ್ ಮದನಿ ಉರುವಾಲುಪದವು ಮತ್ತು ಉಬೈದ್ ಮುಸ್ಲಿಯಾರ್ ಉಸ್ತಾದರ ನೇತೃತ್ವದಲ್ಲಿ ಆಧ್ಯಾತ್ಮಿಕ ಮಜ್ಲಿಸ್ ನಡೆಸಲಾಯಿತು.

ಸಿದ್ದೀಕ್ ಸಖಾಫಿ ಪೆರುವಾಯಿ ಸಂದೇಶ ಭಾಷಣ ಮತ್ತು ಫಾರೂಕ್ ಸಅದಿ ಉಸ್ತಾದರು ಪ್ರವಾದಿ ಪ್ರೇಮದ ಮಹತ್ವದ ಬಗ್ಗೆ ಪ್ರಭಾಷಣ ನಡೆಸಿ, ಅಸ್ಸುಫ್ಫ ತರಗತಿಯ ಅನಿವಾರ್ಯತೆ ಮತ್ತು ಅನಿವಾಸಿ ಕನ್ನಡಿಗರ ಏಕೈಕ ಕನ್ನಡ ಪತ್ರಿಕೆಯಾದ ಇಶಾರ ಮಾಸಿಕ ಪತ್ರಿಕೆಯ ಚಂದಾದಾರರಾಗಲು ಕರೆ ನೀಡಿದರು.

ಕೆಸಿಎಫ್ ಕ್ಯಾಲೆಂಡರ್ ರಾಷ್ಟ್ರೀಯ ಸಂಘಟನಾ ಇಲಾಖೆ ಕಾರ್ಯದರ್ಶಿ ಬಶೀರ್ ತಲಪ್ಪಾಡಿ ಬಿಡುಗಡೆಗೊಳಿಸಿದರು . ರಬೀ- ಉಲ್- ಅವ್ವಲ್ ಪ್ರಯುಕ್ತ ನಡೆಸಿದ ಹದೀಸ್ ಪರೀಕ್ಷೆ ಮತ್ತು ಕ್ವಿಜ್ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಹಲವಾರು ಗಣ್ಯ ವ್ಯಕ್ತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಿಯಾದ್ ಝೋನ್ ಪ್ರಧಾನ ಕಾರ್ಯದರ್ಶಿ ನಿಝಾಮುದ್ದೀನ್ ಉಸ್ಮಾನ್ ಸ್ವಾಗತಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ