ಅಮರಾವತಿ.ಅ,01:ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ಚುನಾವಣೆ ವೇಳೆ ನೀಡಲಾದ ಭರವಸೆಗಳನ್ನು ಈಡೇರಿಸೋದರಲ್ಲೇ ನಿರತರಾಗಿದ್ದು,ಇದೀಗ ಒಂದೇ ದಿನ 1 ಲಕ್ಷದ 26 ಸಾವಿರ ಜನರಿಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಚುನಾವಣೆ ವೇಳೆ ನಿರುದ್ಯೋಗಿ ಯುವ ಜನತೆಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಜಗನ್ ಇದೀಗ ಒಂದೇ ಭಾರಿಗೆ 1 ಲಕ್ಷದ 26 ಸಾವಿರ ಸರ್ಕಾರಿ ಉದ್ಯೋಗಕ್ಕೆ ನೇಮಕ ನಡೆಸಿದ್ದು ನಿನ್ನೆ ನಡೆದ ಸಮಾರಂಭದಲ್ಲಿ ಸ್ವತಃ ತಾವೇ ಅಭ್ಯರ್ಥಿಗಳಿಗೆ ನೇಮಕಪತ್ರ ನೀಡಿ ಶುಭಹಾರೈಸಿ ನುಡಿದಂತೆ ನಡೆಯುವ ವಿಶ್ವಾಸ ಮೂಡಿಸಿದರು.
ಇದೇ ವೇಳೆ ಮಾತನಾಡಿದ ಜಗನ್ಮೋಹನ್ ರೆಡ್ಡಿ, ಇನ್ಮುಂದೆ ಪ್ರತಿವರ್ಷವೂ ಸರ್ಕಾರಿ ಉದ್ಯೋಗದಲ್ಲಿ ಯುವಕರ ನೇಮಕಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಿದ್ದ ಜಗನ್, 3 ಸಾವಿರ ಗೌರವಧನ ಪಡೆಯುತ್ತಿದ್ದ ಕಾರ್ಯಕರ್ತೆಯರಿಗೆ 10 ಸಾವಿರ ಗೌರವಧನ ನಿಗದಿ ಪಡಿಸಿದ್ದರು. ಇದಲ್ಲದೇ ಹಲವು ಜನಪರ ಯೋಜನೆ ಪ್ರಕಟಿಸಿದ್ದ ಸಿಎಂ ವೃದ್ಧಾಪ್ಯ ವೇತನದ ಮೊತ್ತವನ್ನು ಹೆಚ್ಚಿಸಿ ಜನಮೆಚ್ಚುಗೆ ಗಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
15,000 ಜನರನ್ನು ಕೊಲ್ಲುವ ಗುರಿ: ಮುಹರಂ ಕಾರ್ಯಕ್ರಮದಲ್ಲಿ ವಿಷಪೂರಿತ ಮಾತ್ರೆಗಳನ್ನು ವಿತರಿಸಿದ ವ್ಯಕ್ತಿ ಬಂಧನ
‘ತೂಫಾನ್’ ಗೆ ಮರ್ಕಝ್ ಸಾಥ್ : ಕಾಂತಪುರಂ ಉಸ್ತಾದ್- ಗೃಹ ಸಚಿವ ರಮೇಶ್ ಚೆನ್ನಿತ್ತಲ ಸಮಾಲೋಚನೆ
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ