ಒಂದೇ ದಿನ 1.26 ಸಾವಿರ ಸರ್ಕಾರಿ ಉದ್ಯೋಗ ನೀಡಿದ ಆಂಧ್ರ ಸಿಎಂ

ಅಮರಾವತಿ.ಅ,01:ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಯವರು ಅಧಿಕಾರಕ್ಕೆ ಬಂದಾಗಿನಿಂದಲೂ ಚುನಾವಣೆ ವೇಳೆ ನೀಡಲಾದ ಭರವಸೆಗಳನ್ನು ಈಡೇರಿಸೋದರಲ್ಲೇ ನಿರತರಾಗಿದ್ದು,ಇದೀಗ ಒಂದೇ ದಿನ 1 ಲಕ್ಷದ 26 ಸಾವಿರ ಜನರಿಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಚುನಾವಣೆ ವೇಳೆ ನಿರುದ್ಯೋಗಿ ಯುವ ಜನತೆಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಜಗನ್ ಇದೀಗ ಒಂದೇ ಭಾರಿಗೆ 1 ಲಕ್ಷದ 26 ಸಾವಿರ ಸರ್ಕಾರಿ ಉದ್ಯೋಗಕ್ಕೆ ನೇಮಕ ನಡೆಸಿದ್ದು ನಿನ್ನೆ ನಡೆದ ಸಮಾರಂಭದಲ್ಲಿ ಸ್ವತಃ ತಾವೇ ಅಭ್ಯರ್ಥಿಗಳಿಗೆ ನೇಮಕಪತ್ರ ನೀಡಿ ಶುಭಹಾರೈಸಿ ನುಡಿದಂತೆ ನಡೆಯುವ ವಿಶ್ವಾಸ ಮೂಡಿಸಿದರು.

ಇದೇ ವೇಳೆ ಮಾತನಾಡಿದ ಜಗನ್‌ಮೋಹನ್ ರೆಡ್ಡಿ, ಇನ್ಮುಂದೆ ಪ್ರತಿವರ್ಷವೂ ಸರ್ಕಾರಿ ಉದ್ಯೋಗದಲ್ಲಿ ಯುವಕರ ನೇಮಕಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.

ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ‌ ಮಾಡಿದ್ದ ಜಗನ್, 3 ಸಾವಿರ ಗೌರವಧನ ಪಡೆಯುತ್ತಿದ್ದ ಕಾರ್ಯಕರ್ತೆಯರಿಗೆ 10 ಸಾವಿರ ಗೌರವಧನ ನಿಗದಿ ಪಡಿಸಿದ್ದರು. ಇದಲ್ಲದೇ ಹಲವು ಜನಪರ ಯೋಜನೆ ಪ್ರಕಟಿಸಿದ್ದ ಸಿಎಂ ವೃದ್ಧಾಪ್ಯ ವೇತನದ ಮೊತ್ತವನ್ನು ಹೆಚ್ಚಿಸಿ ಜನಮೆಚ್ಚುಗೆ ಗಳಿಸಿದ್ದಾರೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!