ಡೆಹ್ರಾಡೂನ್: ಮೋಟಾರು ವಾಹನ ಕಾಯ್ದೆಯಡಿ ಎತ್ತಿನ ಗಾಡಿ ಮಾಲೀಕನಿಗೆ ಪೊಲೀಸರು 1,000 ರೂ ದಂಡ ವಿಧಿಸಿದ್ದಾರೆ. ಮೊಟಾರು ವಾಹನ ಕಾಯ್ದೆಯಡಿ ದಂಡ ವಿಧಿಸಲು ಅವಕಾಶವಿಲ್ಲ ಎಂಬುದು ನಂತರ ಅರಿತುಕೊಂಡ ಪೊಲೀಸರು ದಂಡವನ್ನು ಮತ್ತೆ ರದ್ದುಗೊಳಿಸಿದರು. ಡೆಹ್ರಾಡೂನ್ನ ಹೊರವಲಯದಲ್ಲಿರುವ ಸಹಸ್ಪುರದ ಚಾರ್ಬಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಎತ್ತಿನ ಗಾಡಿ ಮಾಲೀಕ ರಿಯಾಝ್ ಹಸನ್ ತನ್ನ ಜಮೀನಿನ ಬಳಿ ಗಾಡಿಯನ್ನು ನಿಲ್ಲಿಸಿದ್ದ, ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸಬ್ ಇನ್ಸ್ಪೆಕ್ಟರ್ ಪಂಕಜ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಈ ವಾಹನವನ್ನು ರಾತ್ರಿ ಪತ್ತೆ ಹಚ್ಚಿದ್ದು, ಸ್ಥಳೀಯರಲ್ಲಿ ಇದರ ಬಗ್ಗೆ ವಿಚಾರಿಸಿದಾಗ, ಅದು ರಿಯಾಝ್ ಅವರಿಗೆ ಸೇರಿದ್ದು ಎಂಬುದು ಕಂಡು ಬಂದಿತ್ತು. ತರುವಾಯ ಎಂವಿ ಕಾಯ್ದೆಯ ಸೆಕ್ಷನ್ 81ರ ಅಡಿಯಲ್ಲಿ 1,000 ರೂ. ದಂಡ ವಿಧಿಸಿದ ಪೊಲೀಸರು ಪಚೀತಿಗೆ ಸಿಲುಕಿದ್ದರು.
ತನ್ನ ವಾಹನವನ್ನು ತನ್ನ ಸ್ವಂತ ಮೈದಾನದ ಹೊರಗೆ ನಿಲ್ಲಿಸಿದ್ದಕ್ಕಾಗಿ ಹೇಗೆ ದಂಡ ವಿಧಿಸಿದ್ದೀರಿ ಎಂದು ರಿಯಾಝ್ ಪೊಲೀಸರಿಗೆ ಕೇಳಿದ್ದಾರೆ. ಎತ್ತುಗಾಡಿಯು ಎಂವಿ ಕಾಯ್ದೆ ವ್ಯಾಪ್ತಿಗೆ ಒಳಪಡದ ಕಾರಣ ಎಂವಿ ಕಾಯ್ದೆಯಡಿ ದಂಡವನ್ನು ಏಕೆ ವಿಧಿಸಲಾಗಿದೆ ಎಂದು ಅವರು ಕೇಳಿದಾಗ, ತಪ್ಪನ್ನು ಮನಗಂಡ ಪೊಲೀಸರು ಚಲನನ್ನು ರದ್ದುಗೊಳಿಸಿದ್ದಾರೆ.
ಅದು ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶವಾಗಿದ್ದು, ಮರಳು ಸಾಗಿಸಲು ಎತ್ತುಗಾಡಿಯನ್ನು ಬಳಸುವುದು ಸಾಮಾನ್ಯವಾಗಿದೆ. ಈ ಉದ್ದೇಶಕ್ಕಾಗಿ ರಿಯಾಝ್ನ ಎತ್ತು ಗಾಡಿಯನ್ನು ಬಳಸಲಾಗುತ್ತಿದೆ ಎಂದು ಪೊಲೀಸರು ಶಂಕಿಸಿ, ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಐಪಿಸಿ ಅಡಿಯಲ್ಲಿ ದಂಡ ವಿಧಿಸುವ ಬದಲು ಎಂವಿ ಕಾಯ್ದೆ ಮೂಲಕ ದಂಡ ವಿಧಿಸಿದ್ದು ಈ ವಿದ್ಯಮಾನಗಳಿಗೆ ಕಾರಣವಾಯಿತು ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ
ಕಳಮಶ್ಶೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ಡೊಮಿನಿಕ್ ಮಾರ್ಟಿನ್- ದೃಢೀಕರಿಸಿದ ಪೊಲೀಸ್
ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದು ನಾನೇ – ಪೊಲೀಸ್ ಠಾಣೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ