ಮಾದಕವಸ್ತು ಕಳ್ಳಸಾಗಣೆ: ಬಹ್ರೈನ್ ಯುವಕನಿಗೆ ಸೌದಿಯಲ್ಲಿ ಗಲ್ಲು

ರಿಯಾದ್: ಸೌದಿ ಅರೇಬಿಯಾದಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡಿರುವ ಅಪರಾಧಕ್ಕಾಗಿ ಸೌದಿ ಅರೇಬಿಯಾದ ಸಚಿವಾಲಯವು ಬಹ್ರೈನಿ ವ್ಯಕ್ತಿಗೆ ಮರಣದಂಡನೆ ವಿಧಿಸಿದೆ. ಸೌದಿ ಅರೇಬಿಯಾದಲ್ಲಿ ನಿಷೇಧಿಸಲಾದ ಆಂಫೆಟಾಮೈನ್‌ ಅನ್ನು ಕಳ್ಳಸಾಗಣೆ ಮಾಡಿದ ಬಹ್ರೈನಿ ಪ್ರಜೆ ಅಮರ್ ಅಬ್ದುಲ್ ಅಝೀಝ್ ಮನ್ಸೂರ್ ಅಲಿ ಹಸನ್‌ನನ್ನು ಬಂಧಿಸಲಾಗಿತ್ತು.

ಆರೋಪಿ ತಪ್ಪೊಪ್ಪಿಕೊಂಡಿದ್ದು ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ಈ ತೀರ್ಪನ್ನು ಅಪೀಲ್ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ಆತನಿಗೆ ವಧಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!