ದಮ್ಮಾಮ್: \nಕಾಸರಗೋಡು ಜಾಮಿಅ ಸಅದಿಯ್ಯ ಅರಬಿಯ ಸುವರ್ಣ ಮಹೋತ್ಸವ “ಮುಲ್ತಖಾ ಅಸ್ಸಆದ-19” (ಗ್ರ್ಯಾಂಡ್ ಫ್ಯಾಮಿಲಿ ಮೀಟ್) ಅಕ್ಟೋಬರ್ 3 ರಂದು ದಮ್ಮಾಮಿನಲ್ಲಿ ನಡೆಯಲಿದೆ, ಇದರ ಘೋಷಣಾ ಸಮಾವೇಶ ಸೆಪ್ಟೆಂಬರ್ 5 ದಮ್ಮಾಮಿನ ಹೋಲಿಡೇಸ್ ಸಭಾಂಗಣದಲ್ಲಿ ನಡೆಯಿತು.ಖುರ್ ಆನ್ ವಾಚನ, ಕಲೆ ಮತ್ತು ಸಾಹಿತ್ಯ ಸ್ಪರ್ಧೆಗಳು, ದಫ್ ಪ್ರದರ್ಶನ, *ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರ ಪ್ರೇಮ ಕಾವ್ಯಗಳು* , ಪುಸ್ತಕ ಪರೀಕ್ಷೆ ಮತ್ತು ಉಪನ್ಯಾಸ ಮುಂತಾದ ಕಾರ್ಯಕ್ರಮಗಳು ಈ ಬೃಹತ್ ಸಮಾವೇಶದ ಭಾಗವಾಗಲಿವೆ.
ಗ್ರ್ಯಾಂಡ್ ಫ್ಯಾಮಿಲಿ ಮೀಟ್ನ ಘೋಷಣೆ ಅಲ್ ಖೋಬರ್, ಅಲ್ ಜುಬೈಲ್ ಮತ್ತು ದಮ್ಮಾಮ್ ನಲ್ಲಿ ನಡೆಯಿತು.
ಸಅದಿಯ್ಯ ದಮ್ಮಾಮ್ ಸಮಿತಿ ಅಧ್ಯಕ್ಷ ಕುಂಜಾರ್ ಅಬ್ಬಾಸ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ದಮ್ಮಾಮ್ ಸೀಕೊ ಪರಿಸರದಲ್ಲಿರುವ ಹೋಲಿಡೇಸ್ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮವನ್ನು ಐಸಿಎಫ್ ಮುಖ್ಯಸ್ಥ ಮುಹಮ್ಮದ್ ಕುಞ ಅಮಾನಿ ಉದ್ಘಾಟಿಸಿದರು.
ಸಯ್ಯಿದ್ ಮುಸ್ತಫಾ ತಂಙಳ್ ಆದೂರ್ ರವರು ಪ್ರಾರ್ಥನೆ ಸಲ್ಲಿಸಿದರು.
ಸಯ್ಯಿದ್ ಶರಫುದ್ದೀನ್ ಸಅದಿ ಅಲ್ ಮುಖೈಬಿಲಿ (ಮುಳವೂರ್ ತಂಙಳ್) ಮುಖ್ಯ ಭಾಷಣ ಮಾಡಿದರು. ಯೂಸುಫ್ ಸಅದಿ ಅಯ್ಯಂಗೇರಿರವರು ಅಕ್ಟೋಬರ್ 3 ರಂದು ನಡೆಯುವ ಮುಲ್ತಖ ಅಸ್ಸಆದಃ 19 ವಿಶೇಷ ಕಾರ್ಯಕ್ರಮಕ್ಕೆ ಸರ್ವರನ್ನು ಆಮಂತ್ರಿಸಿ ಸಹಕಾರ ಬಯಸಿದರು.
ಮುಲ್ತಖ ಅಸ್ಸಆದಃ -19 ಹಿಜರಿ ಕ್ಯಾಲೆಂಡರ್ ಸಯ್ಯಿದ್ ಮುಸ್ತಫಾ ತಂಙಳ್ ರವರು ಉದ್ಯಮಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ರೈಸ್ಕೋ ಅಬೂಬಕರ್ ಹಾಜಿಯವರಿಗೆ ಪ್ರಥಮ ಪ್ರತಿ ನೀಡಿ ಬಿಡುಗಡೆ ಮಾಡಿದರು.ಐಸಿಎಫ್ ಪೂರ್ವ ಪ್ರಾಂತ್ಯದ ಕಾರ್ಯದರ್ಶಿ ಅನ್ವರ್ ಕಳರೋಡು, ದಮ್ಮಾಮ್ ಕೇಂದ್ರ ಅಧ್ಯಕ್ಷ ಅಬ್ದುಸ್ಸಮದ್ ಮುಸ್ಲಿಯಾರ್, ಆರ್ಎಸ್ಸಿ ದಮ್ಮಾಮ್ ವಲಯ ಅಧ್ಯಕ್ಷ ಬಶೀರ್ ಬುಖಾರಿ, ಹಮೀದ್ ವಡಗರ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ಫಾರೂಕ್ ಕಾಟಿಪಳ್ಳ ‘ಕಿಸ್ವಾ ಪೂರ್ವ ಪ್ರಾಂತ್ಯದ ಅಧ್ಯಕ್ಷ ಆದಂ ಕೊಡಗು, ಕಾಸರಗೋಡು ಜಿಲ್ಲಾ ಸಾಮಾಜಿಕ ವೇದಿಕೆಯ ಅಧ್ಯಕ್ಷರಾದ ಖಾದರ್ ಅಣಂಗೂರು, ಕೆಎಂಸಿಸಿ ಕೇಂದ್ರ ಜನರಲ್ ಕನ್ವೀನರ್ ಅಝೀಝ್ ಸಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.ಲತೀಫ್ ಪಳ್ಳತ್ತಡ್ಕ ಸ್ವಾಗತಿಸಿದರು ಮತ್ತು ಇಕ್ಬಾಲ್ ಕೈರಂಗಳ ಧನ್ಯವಾದಗೈದರು.















ಇನ್ನಷ್ಟು ಸುದ್ದಿಗಳು
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ