ಸಅದಿಯ ಮುಲ್ತಖಃ ಅಸ್ಸಆದಃ’19 ಘೋಷಣಾ ಸಮಾವೇಶ

ದಮ್ಮಾಮ್: \nಕಾಸರಗೋಡು ಜಾಮಿಅ ಸಅದಿಯ್ಯ ಅರಬಿಯ ಸುವರ್ಣ ಮಹೋತ್ಸವ “ಮುಲ್ತಖಾ ಅಸ್ಸಆದ-19” (ಗ್ರ್ಯಾಂಡ್ ಫ್ಯಾಮಿಲಿ ಮೀಟ್) ಅಕ್ಟೋಬರ್ 3 ರಂದು ದಮ್ಮಾಮಿನಲ್ಲಿ ನಡೆಯಲಿದೆ, ಇದರ ಘೋಷಣಾ ಸಮಾವೇಶ ಸೆಪ್ಟೆಂಬರ್ 5 ದಮ್ಮಾಮಿನ ಹೋಲಿಡೇಸ್ ಸಭಾಂಗಣದಲ್ಲಿ ನಡೆಯಿತು.ಖುರ್ ಆನ್ ವಾಚನ, ಕಲೆ ಮತ್ತು ಸಾಹಿತ್ಯ ಸ್ಪರ್ಧೆಗಳು, ದಫ್ ಪ್ರದರ್ಶನ, *ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರ ಪ್ರೇಮ ಕಾವ್ಯಗಳು* , ಪುಸ್ತಕ ಪರೀಕ್ಷೆ ಮತ್ತು ಉಪನ್ಯಾಸ ಮುಂತಾದ ಕಾರ್ಯಕ್ರಮಗಳು ಈ ಬೃಹತ್ ಸಮಾವೇಶದ ಭಾಗವಾಗಲಿವೆ.ಗ್ರ್ಯಾಂಡ್ ಫ್ಯಾಮಿಲಿ ಮೀಟ್‌ನ ಘೋಷಣೆ ಅಲ್ ಖೋಬರ್, ಅಲ್ ಜುಬೈಲ್ ಮತ್ತು ದಮ್ಮಾಮ್ ನಲ್ಲಿ ನಡೆಯಿತು.
ಸಅದಿಯ್ಯ ದಮ್ಮಾಮ್ ಸಮಿತಿ ಅಧ್ಯಕ್ಷ ಕುಂಜಾರ್ ಅಬ್ಬಾಸ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ದಮ್ಮಾಮ್ ಸೀಕೊ ಪರಿಸರದಲ್ಲಿರುವ ಹೋಲಿಡೇಸ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಐಸಿಎಫ್ ಮುಖ್ಯಸ್ಥ ಮುಹಮ್ಮದ್ ಕುಞ ಅಮಾನಿ ಉದ್ಘಾಟಿಸಿದರು.
ಸಯ್ಯಿದ್ ಮುಸ್ತಫಾ ತಂಙಳ್ ಆದೂರ್ ರವರು ಪ್ರಾರ್ಥನೆ ಸಲ್ಲಿಸಿದರು.
ಸಯ್ಯಿದ್ ಶರಫುದ್ದೀನ್ ಸಅದಿ ಅಲ್ ಮುಖೈಬಿಲಿ (ಮುಳವೂರ್ ತಂಙಳ್) ಮುಖ್ಯ ಭಾಷಣ ಮಾಡಿದರು. ಯೂಸುಫ್ ಸಅದಿ ಅಯ್ಯಂಗೇರಿರವರು ಅಕ್ಟೋಬರ್ 3 ರಂದು ನಡೆಯುವ ಮುಲ್ತಖ ಅಸ್ಸಆದಃ 19 ವಿಶೇಷ ಕಾರ್ಯಕ್ರಮಕ್ಕೆ ಸರ್ವರನ್ನು ಆಮಂತ್ರಿಸಿ ಸಹಕಾರ ಬಯಸಿದರು.ಮುಲ್ತಖ ಅಸ್ಸಆದಃ -19 ಹಿಜರಿ ಕ್ಯಾಲೆಂಡರ್ ಸಯ್ಯಿದ್ ಮುಸ್ತಫಾ ತಂಙಳ್ ರವರು ಉದ್ಯಮಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ರೈಸ್ಕೋ ಅಬೂಬಕರ್ ಹಾಜಿಯವರಿಗೆ ಪ್ರಥಮ ಪ್ರತಿ ನೀಡಿ ಬಿಡುಗಡೆ ಮಾಡಿದರು.ಐಸಿಎಫ್ ಪೂರ್ವ ಪ್ರಾಂತ್ಯದ ಕಾರ್ಯದರ್ಶಿ ಅನ್ವರ್ ಕಳರೋಡು, ದಮ್ಮಾಮ್ ಕೇಂದ್ರ ಅಧ್ಯಕ್ಷ ಅಬ್ದುಸ್ಸಮದ್ ಮುಸ್ಲಿಯಾರ್, ಆರ್‌ಎಸ್‌ಸಿ ದಮ್ಮಾಮ್ ವಲಯ ಅಧ್ಯಕ್ಷ ಬಶೀರ್ ಬುಖಾರಿ, ಹಮೀದ್ ವಡಗರ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ಫಾರೂಕ್ ಕಾಟಿಪಳ್ಳ ‘ಕಿಸ್ವಾ ಪೂರ್ವ ಪ್ರಾಂತ್ಯದ ಅಧ್ಯಕ್ಷ ಆದಂ ಕೊಡಗು, ಕಾಸರಗೋಡು ಜಿಲ್ಲಾ ಸಾಮಾಜಿಕ ವೇದಿಕೆಯ ಅಧ್ಯಕ್ಷರಾದ ಖಾದರ್ ಅಣಂಗೂರು, ಕೆಎಂಸಿಸಿ ಕೇಂದ್ರ ಜನರಲ್ ಕನ್ವೀನರ್ ಅಝೀಝ್ ಸಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.ಲತೀಫ್ ಪಳ್ಳತ್ತಡ್ಕ ಸ್ವಾಗತಿಸಿದರು ಮತ್ತು ಇಕ್ಬಾಲ್ ಕೈರಂಗಳ ಧನ್ಯವಾದಗೈದರು.

Leave a Reply

Your email address will not be published. Required fields are marked *

error: Content is protected !!