ಮಡಿಕೇರಿ:ಕೊಡಗಿನಲ್ಲಿ ಭೂಕುಸಿತಕ್ಕೆ ಶುಕ್ರವಾರ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ತಾಲ್ಲೂಕಿನ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಭೂಕುಸಿತದಿಂದ ಮೃತಪಟ್ಟವರ ಪೈಕಿ, ಮೂವರು ರಕ್ಷಣೆಗೆ ಧಾವಿಸಿದವರು.
ಮನೆ ಮಾಲೀಕ ಯಶವಂತ್, ರಕ್ಷಣೆಗೆ ತೆರಳಿದ್ದ ಬಾಲಕೃಷ್ಣ, ಯಮುನಾ, ಉದಯ್ ಮೃತಪಟ್ಟವರು. ಮನೆಯಲ್ಲಿದ್ದ ದಿಗಂತ್, ಶಶಿಕಲಾ ಪಾರಾಗಿದ್ದಾರೆ. ಅದೇ ಸ್ಥಳದಲ್ಲಿ ಮತ್ತೊಬ್ಬರ ಮೃತದೇಹ ಪತ್ತೆಯಾಗಿದೆ.ಮನೆಯವರನ್ನು, ಸುರಕ್ಷಿತ ಪ್ರದೇಶಕ್ಕೆ ಬರುವಂತೆ ಮನವೊಲಿಸಲು ತೆರಳಿದಾಗಲೇ ಭೂಕುಸಿತ ಸಂಭವಿಸಿದೆ.
ವಿರಾಜಪೇಟೆ ತಾಲ್ಲೂಕು ತೋರ ಗ್ರಾಮದಲ್ಲಿ ಮಮತಾ (40), ಲಿಖಿತಾ (15) ಭೂಕುಸಿತದಿಂದ ಮೃತಪಟ್ಟಿದ್ದಾರೆ. ಅದೇ ಸ್ಥಳದಲ್ಲಿ ಹಲವು ಮನೆಗಳು ನೆಲಸಮವಾಗಿವೆ. 8ಕ್ಕೂ ಹೆಚ್ಚು ಮಂದಿ ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಎನ್ಡಿಆರ್ಎಫ್ ಹಾಗೂ ಭಾರತೀಯ ಸೇನೆ ಸಿಬ್ಬಂದಿ ತೋರ ಗ್ರಾಮದಲ್ಲಿ 300 ಜನರನ್ನು ರಕ್ಷಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಫೆ.21(ನಾಳೆ)ರಿಂದ ಇತಿಹಾಸ ಪ್ರಸಿದ್ಧ ಕೊಡಗು ಎಮ್ನೆಮ್ಮಾಡು ಮಖಾಂ ಉರೂಸ್ ಆರಂಭ
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಹಲೀಮ ಅಲ್ ಕಿಂದಿ ವುಮೆನ್ಸ್ ಅಕಾಡೆಮಿ’ಮರ್ಕಝ್ ಕೊಟ್ಟಮುಡಿ’ – ದ್ವಿತೀಯ ಪಿಯುಸಿಗೆ ಶೇ100 ಫಲಿತಾಂಶ
SYS 30ನೇ ವಾರ್ಷಿಕ ಸಮ್ಮೇಳನ ಪ್ರಚಾರ- ಕೊಡಗು ಜಿಲ್ಲಾ ಉಲಮಾ ಸಂಗಮ
ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಸಮಿತಿ- ನೂತನ ಸಾರಥಿಗಳು
‘ಪರಂಪರೆಯ ಪ್ರತಿನಿಧಿಗಳಾಗೋಣ’ : ಸಿದ್ಧಾಪುರದಲ್ಲಿ ನಡೆದ ಅದ್ದೂರಿ ಎಸ್ ವೈ ಎಸ್ ಯುವಜನೋತ್ಸವ
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಅಶಾಂತಿ ಉಂಟು ಮಾಡುವವರಿಗೆ ಕಠಿಣ ಶಿಕ್ಷೆಯಾಗಲಿ: ಎಸ್ಸೆಸ್ಸೆಫ್ ಕೊಡಗು
ಕೊಡಗು ಎಸ್ಸೆಸ್ಸೆಫ್ ಕ್ಯಾಂಪಸ್ ಅಸ್ಸೆಂಬ್ಲಿ ಯಶಸ್ವಿ ಸಮಾಪ್ತಿ
ಕೊಡಗು ಸುನ್ನೀ ಸಮನ್ವಯ ಸಮಿತಿಯಿಂದ ಮೊಹಲ್ಲಾ ನಾಯಕರ ಸಂಗಮ