janadhvani

Kannada Online News Paper

ಕುದ್ರೋಳಿ ದರ್ಗಾ ದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಹಾಗೂ ಇಪ್ತಾರ್ ಕೂಟ

ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ. ಸಿ) ದರ್ಗಾ ಸಮಿತಿ ಕುದ್ರೋಳಿ ಮಂಗಳೂರು ಇದರ ಆಶ್ರಯದಲ್ಲಿ ಇಂದು ಮಳೆಗಾಗಿ ವಿಶೇಷ ಪ್ರಾರ್ಥನಾ ಮಜ್ಲಿಸ್ ಹಾಗೂ ಇಪ್ತಾರ್ ಕೂಟ ನಡೆಸಲಾಯಿತು.

ದರ್ಗಾ ಅಧ್ಯಕ್ಷ ಮುಸ್ತಾಕ್ ಅಹ್ಮದ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡುಪಳ್ಳಿ ಜುಮಾ ಮಸೀದಿ ಖತೀಬರಾದ ಬಹು ಅಬ್ದುಸ್ಸಲಾಂ ಯಮಾನಿ ತುಂಬೆ ದುಆ ನೇತೃತ್ವ ನೀಡಿದರು.

ಸ್ಥಳೀಯ ಕಾರ್ಪೋರೇಟರ್ ಅಬ್ದುಲ್ ಅಝೀಝ್, ನಡುಪಳ್ಳಿ ಅಧ್ಯಕ್ಷ ಪಝಲ್, ದರ್ಗಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಹಾಗೂ ಸಮಿತಿ ಯ ಸದಸ್ಯರು ಊರಿನ ನಾಗರಿಕರು ಭಾಗವಹಿಸಿದ್ದರು.