ರಿಯಾದ್: ವಿಶ್ವದಲ್ಲೇ ಅತ್ಯಂತ ದೊಡ್ಡ ಮೊತ್ತದ ಬಹುಮಾನವನ್ನು ಸೌದಿ ಅರೇಬಿಯಾ ಘೋಷಿಸಿದ್ದು, ಖುರ್‌ಆನ್ ಪಾರಾಯಣ, ಆಝಾನ್ ಕರೆ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಭೆಗಳಿಗೆ ಭಾರೀ ಮೊತ್ತದ ಬಹುಮಾನ ದೊರೆಯಲಿದೆ. ಈ ಸ್ಪರ್ಧೆಯಲ್ಲಿ ವಿಶ್ವದ ಯಾವುದೇ ರಾಷ್ಟ್ರದಿಂದಲೂ ಯಾರಿಗೆ ಬೇಕಾದರೂ ಭಾಗವಹಿಸಬಹುದಾಗಿದ್ದು, ವಿಜೇತರಿಗೆ ಸುಮಾರು ಮೂವತ್ತೆರಡು ಲಕ್ಷ ಡಾಲರ್ ಮೊತ್ತವನ್ನು ಹಂಚಲಾಗುತ್ತದೆ. ಜನರಲ್ ಎಂಟರ್ಟೈನ್ಮೆಂಟ್ ಅಥಾರಿಟುಯು ಈ ಸ್ಪರ್ಧೆಯನ್ನು ನಡೆಸಲಿದೆ.
ಜನರಲ್ ಎಂಟರ್ಟೈನ್ಮೆಂಟ್ ಅಥಾರಿಟಿ ಡೈರೆಕ್ಟರ್ ಬೋರ್ಡ್ ಚೇರ್ಮನ್ ತುರ್ಕಿ ಆಲುಶೈಖ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಖುರ್‌ಆನ್ ಪಾರಾಯಣವು ನಿಯಮ, ಅರ್ಥವನ್ನು ತಿಳಿದು ಶ್ರುತಿ ಮಧುರವಾಗಿ ಇರಬೇಕು. ಖುರ್‌ಆನ್ ಪಾರಾಯಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 50 ಲಕ್ಷ ರಿಯಾಲ್ ದೊರಕಲಿದ್ದು, ದ್ವಿತೀಯ 20 ಲಕ್ಷ ರಿಯಾಲ್, ತೃತೀಯ 10 ಲಕ್ಷ ರಿಯಾಲ್, ನಾಲ್ಕನೇ ಬಹುಮಾನವಾಗಿ 5 ಲಕ್ಷ ರಿಯಾಲ್ ಲಭಿಸಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರ ಖುರ್‌ಆನ್ ಪಾರಾಯಣವನ್ನು ಜಗತ್ತಿನಾದ್ಯಂತ ಪ್ರಾಸಾರಗೊಳಿಸಲಾಗುವುದು.
ಉತ್ತಮ ಧ್ವನಿಯಲ್ಲಿ ಅಝಾನ್ ಕರೆ ನೀಡುವುದು ಮತ್ತೊಂದು ಸ್ಪರ್ಧಾ ಮಾದರಿಯಾಗಿದ್ದು, ವಿಜೇತರಿಗೆ ಪ್ರಥಮ 20 ಲಕ್ಷ, ದ್ವಿತೀಯ 10 ಲಕ್ಷ, ತೃತೀಯ 5 ಲಕ್ಷ, ಚತುರ್ಥ ಎರಡುವರೆ ಲಕ್ಷ ರಿಯಾಲ್‌ಗಳು ಬಹುಮಾನ ದೊರಯಲಿದೆ. ಅದೂ ಅಲ್ಲದೆ ವಿಜೇತರಿಗೆ ಪುಣ್ಯ ಮಸ್ಜಿದುನ್ನಬವಿಯಲ್ಲಿ ಅಝಾನ್ ಕರೆ ನೀಡುವ ಸೌಭಾಗ್ಯ ಲಭಿಸಲಿದೆ.
www.quranathanawards.com
ಎನ್ನುವ ವೆಬ್‌ಸೈಟ್ ಮೂಲಕ ಜೂನ್ 22ರ ಮುಂಚಿತವಾಗಿ ಸ್ಪರ್ಧಾರ್ಥಿಗಳು ಹೆಸರು ನೋಂದಾಯಿಸಬೇಕು. ಜುಲೈ 23ರಿಂದ ಆಗಸ್ಟ್ 23ರ ವರೆಗೆ ಆನ್‌ಲೈನ್ ಸ್ಪರ್ಧೆ ನಡೆಯಲಿದ್ದು, ಆಗಸ್ಟ್ 24ರಿಂದ ಸೆಪ್ಟೆಂಬರ್ 24ರ ವರೆಗೆ ನೇರವಾಗಿ ಸ್ಪರ್ಧೆ ನಡಯಲಿದೆ. ನಂತರ ಅಕ್ಟೋಬರ್ 25ರ ಒಳಗೆ ವಿಜೇತರ ಆಯ್ಕೆ ನಡೆಯಲಿದ್ದು, ಬಹುಮಾನ ವಿತರಣೆ ಕೂಡ ನಡೆಯಲಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ