janadhvani

Kannada Online News Paper

ಭಾರೀ ಮೊತ್ತದ ಬಹುಮಾನದೊಂದಿಗೆ ಖುರ್‌ಆನ್ ಮತ್ತು ಅಝಾನ್ ಸ್ಪರ್ಧೆ- ಸೌದಿಯಲ್ಲಿ

ರಿಯಾದ್: ವಿಶ್ವದಲ್ಲೇ ಅತ್ಯಂತ ದೊಡ್ಡ ಮೊತ್ತದ ಬಹುಮಾನವನ್ನು ಸೌದಿ ಅರೇಬಿಯಾ ಘೋಷಿಸಿದ್ದು, ಖುರ್‌ಆನ್ ಪಾರಾಯಣ, ಆಝಾನ್ ಕರೆ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಭೆಗಳಿಗೆ ಭಾರೀ ಮೊತ್ತದ ಬಹುಮಾನ ದೊರೆಯಲಿದೆ. ಈ ಸ್ಪರ್ಧೆಯಲ್ಲಿ ವಿಶ್ವದ ಯಾವುದೇ ರಾಷ್ಟ್ರದಿಂದಲೂ ಯಾರಿಗೆ ಬೇಕಾದರೂ ಭಾಗವಹಿಸಬಹುದಾಗಿದ್ದು, ವಿಜೇತರಿಗೆ ಸುಮಾರು ಮೂವತ್ತೆರಡು ಲಕ್ಷ ಡಾಲರ್ ಮೊತ್ತವನ್ನು ಹಂಚಲಾಗುತ್ತದೆ. ಜನರಲ್ ಎಂಟರ್ಟೈನ್ಮೆಂಟ್ ಅಥಾರಿಟುಯು ಈ ಸ್ಪರ್ಧೆಯನ್ನು ನಡೆಸಲಿದೆ.

ಜನರಲ್ ಎಂಟರ್ಟೈನ್ಮೆಂಟ್ ಅಥಾರಿಟಿ ಡೈರೆಕ್ಟರ್ ಬೋರ್ಡ್ ಚೇರ್ಮನ್ ತುರ್ಕಿ ಆಲುಶೈಖ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಖುರ್‌ಆನ್ ಪಾರಾಯಣವು ನಿಯಮ, ಅರ್ಥವನ್ನು ತಿಳಿದು ಶ್ರುತಿ ಮಧುರವಾಗಿ ಇರಬೇಕು. ಖುರ್‌ಆನ್ ಪಾರಾಯಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 50 ಲಕ್ಷ ರಿಯಾಲ್ ದೊರಕಲಿದ್ದು, ದ್ವಿತೀಯ 20 ಲಕ್ಷ ರಿಯಾಲ್, ತೃತೀಯ 10 ಲಕ್ಷ ರಿಯಾಲ್, ನಾಲ್ಕನೇ ಬಹುಮಾನವಾಗಿ 5 ಲಕ್ಷ ರಿಯಾಲ್ ಲಭಿಸಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರ ಖುರ್‌ಆನ್ ಪಾರಾಯಣವನ್ನು ಜಗತ್ತಿನಾದ್ಯಂತ ಪ್ರಾಸಾರಗೊಳಿಸಲಾಗುವುದು.

ಉತ್ತಮ ಧ್ವನಿಯಲ್ಲಿ ಅಝಾನ್ ಕರೆ ನೀಡುವುದು ಮತ್ತೊಂದು ಸ್ಪರ್ಧಾ ಮಾದರಿಯಾಗಿದ್ದು, ವಿಜೇತರಿಗೆ ಪ್ರಥಮ 20 ಲಕ್ಷ, ದ್ವಿತೀಯ 10 ಲಕ್ಷ, ತೃತೀಯ 5 ಲಕ್ಷ, ಚತುರ್ಥ ಎರಡುವರೆ ಲಕ್ಷ ರಿಯಾಲ್‌ಗಳು ಬಹುಮಾನ ದೊರಯಲಿದೆ. ಅದೂ ಅಲ್ಲದೆ ವಿಜೇತರಿಗೆ ಪುಣ್ಯ ಮಸ್ಜಿದುನ್ನಬವಿಯಲ್ಲಿ ಅಝಾನ್ ಕರೆ ನೀಡುವ ಸೌಭಾಗ್ಯ ಲಭಿಸಲಿದೆ.

www.quranathanawards.com
ಎನ್ನುವ ವೆಬ್‌ಸೈಟ್ ಮೂಲಕ ಜೂನ್ 22ರ ಮುಂಚಿತವಾಗಿ ಸ್ಪರ್ಧಾರ್ಥಿಗಳು ಹೆಸರು ನೋಂದಾಯಿಸಬೇಕು. ಜುಲೈ 23ರಿಂದ ಆಗಸ್ಟ್ 23ರ ವರೆಗೆ ಆನ್‌ಲೈನ್ ಸ್ಪರ್ಧೆ ನಡೆಯಲಿದ್ದು, ಆಗಸ್ಟ್ 24ರಿಂದ ಸೆಪ್ಟೆಂಬರ್ 24ರ ವರೆಗೆ ನೇರವಾಗಿ ಸ್ಪರ್ಧೆ ನಡಯಲಿದೆ. ನಂತರ ಅಕ್ಟೋಬರ್ 25ರ ಒಳಗೆ ವಿಜೇತರ ಆಯ್ಕೆ ನಡೆಯಲಿದ್ದು, ಬಹುಮಾನ ವಿತರಣೆ ಕೂಡ ನಡೆಯಲಿದೆ.

error: Content is protected !! Not allowed copy content from janadhvani.com