ರಿಯಾದ್: ದೇಶದಲ್ಲಿನ ಸ್ವದೇಶೀ, ವಿದೇಶೀಯರು ಮತ್ತು ಸ್ಥಾಪನೆಗಳು ತಮ್ಮ ಡಾಟಾವನ್ನು ಅಪ್ಡೇಟ್ ಮಾಡುವಂತೆ ಸೌದಿ ಪಾಸ್ಪೋರ್ಟ್ ವಿಭಾಗವು ತಿಳಿಸಿದೆ.
ಅಬ್ಶೀರ್, ಮುಖೀಂ, ಅಬ್ಶೀರ್ ಅಅ್ಮಾಲ್ ಮುಂತಾದ ಪೋರ್ಟಲ್ ಗಳಲ್ಲಿ ನೋಂದಣಿ ಮಾಡಲಾದ ತಮ್ಮ ಅಡ್ರೆಸ್ ವಿವರಗಳು ಮತ್ತು ಅಧಿಕೃತ ದೂರವಾಣಿ ಸಂಖ್ಯೆಗಳನ್ನು ಕೂಡ ಅಪ್ಡೇಟ್ ಮಾಡುವಂತೆ ಜವಾಝಾತ್ ತಿಳಿಸಿದೆ.
https://register.address.gov.sa/en/ ಎಂಬ ವೆಬ್ ಲಿಂಕ್ ಮೂಲಕ ಲಾಗ್ ಇನ್ ಆದರೆ ನ್ಯಾಷನಲ್ ಅಡ್ರೆಸ್ ನೋಂದಣಿ ಮಾಡಲು ಸಾಧ್ಯವಿದೆ.
ನ್ಯಾಷನಲ್ ಅಡ್ರೆಸ್ ನೋಂದಣಿ ಮಾಡುವುದು ಮತ್ತು ಡಾಟಾ ಅಪ್ಡೇಟ್ ಮಾಡುವ ಮೂಲಕ ದೇಶದ ವಿವಿಧ ಪ್ರಾಂತ್ಯದಲ್ಲಿ ಕೆಲಸಮಾಡುವ ಕಾರ್ಮಿಕರೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿದ್ದು, ವಿವರಗಳನ್ನು ಪರಸ್ಪರ ಹಂಚಲೂ ಸಾಧ್ಯವಾಗಲಿದೆ.
ಇಷ್ಟರ ವರೆಗೆ ಅಬ್ಶೀರ್ ಖಾತೆ ಪ್ರಾರಂಭಿಸದ ಸ್ವದೇಶೀ, ವಿದೇಶೀಯರಿದ್ದರೆ ತಕ್ಷಣ ಖಾತೆ ತೆರೆಯಬೇಕಾಗಿದ್ದು, ಆ ಮೂಲಕ ಜವಾಝಾತ್ ಕಚೇರಿಗೆ ಹೋಗದೆಯೇ ಹಲವಾರು ಅಧಿಕೃತ ಕಾರ್ಯವನ್ನು ಪೂರ್ಣಗೊಳಿಸುವುದು ಸಾಧ್ಯವಿದೆ ಎಂದು ಜವಾಝಾತ್ ವಿವರಿಸಿದೆ.
ಇನ್ನಷ್ಟು ಸುದ್ದಿಗಳು
ದುಬೈನಲ್ಲಿ ಕೋವಿಡ್ ಹೆಚ್ಚಳ: ಪ್ರವಾಸೋದ್ಯಮ,ಮನರಂಜನೆಗೆ ನಿರ್ಬಂಧ
ಬಸ್ ನಲ್ಲಿ ಕಿರುಕುಳ: ಆರೋಪಿಯ ಬಂಧನ- ಯುವತಿಯಿಂದ ಕಪಾಳಮೋಕ್ಷ
ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬಿಡೆನ್ ಪ್ರಮಾಣ ವಚನ ಸ್ವೀಕಾರ
ಭಾರತೀಯ ಮಣ್ಣಲ್ಲಿ ಹಳ್ಳಿ ನಿರ್ಮಿಸಿದ ಚೀನಾ- ಪ್ರಧಾನಿ ಮೌನವೇಕೆ?
ಟ್ರಂಪ್ ವಿದಾಯ ಭಾಷಣ- ಹೊಸ ಸರ್ಕಾರಕ್ಕೆ ಶುಭ ಹಾರೈಕೆ
ಗೋರಕ್ಷಕರ ಮೇಲಿನ ಎಲ್ಲಾ ಪ್ರಕರಣಗಳು ವಾಪಸ್- ಪಶು ಸಂಗೋಪನೆ ಸಚಿವ