ಎಸ್ ಎಸ್ ಎಫ್ ರಾಷ್ಟ್ರೀಯ ಪರ್ಯಟನೆ ‘ಹಿಂದ್ ಸಫರ್’ ಗೆ ಇಂದು ಚಾಲನೆ

ದೆಹಲಿ: ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ರಾಷ್ಟ್ರೀಯ ಸಮ್ಮೇಳನದ ಪ್ರಚಾರಾರ್ಥ ಕಾಶ್ಮೀರದಿಂದ ಕೇರಳ ತನಕ ನಡೆಸಲಾಗುವ “ಸಫರ್ ಹಿಂದ್” ರಾಷ್ಟ್ರೀಯ ಪರ್ಯಟನೆಗೆ ಜ.11 ಶುಕ್ರವಾರದಂದು ಕಾಶ್ಮೀರದ ಹಝ್ರತ್ ಬಾಲ್ ಮಸೀದಿಯಲ್ಲಿ ಚಾಲನೆ ನೀಡಲಾಗುವುದು. 28 ದಿನಗಳ ಕಾಲ ನಡೆಯುವ ಪರ್ಯಟನೆಯು 22 ರಾಜ್ಯಗಳ 40 ಕೇಂದ್ರಗಳಲ್ಲಿ ಸಮಾವೇಶಗೊಳ್ಳಲಿದ್ದು, 13,000 ಕಿ.ಮೀ. ಕ್ರಮಿಸಲಿದೆ. ಫೆ.3ರಿಂದ 6 ರವರೆಗೆ ಕರ್ನಾಟಕದಲ್ಲಿ ಪರ್ಯಟನೆ ನಡೆಸಲಿದ್ದು, ರಾಜ್ಯದ ಹುಬ್ಬಳ್ಳಿ, ಬಳ್ಳಾರಿ, ಬೆಂಗಳೂರು, ಮಂಗಳೂರು ಮತ್ತು ಮೈಸೂರುಗಳಲ್ಲಿ ಸಮಾವೇಶಗೊಳ್ಳಲಿದೆ. ಫೆ.7ರಂದು ಕೇರಳದ ಕಲ್ಲಿಕೋಟೆಯಲ್ಲಿ ಸಮಾರೋಪಗೊಳ್ಳಲಿದ್ದು, ಸುನ್ನಿ ಉಲಮಾ ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಭಾಗವಹಿಸುವರು.
ಯಾತ್ರೆಯನ್ನು ಎಸ್ ಎಸ್ ಎಫ್ ರಾಷ್ಟ್ರೀಯ ನಾಯಕರಾದ ಮೌಲಾನಾ ಶೌಕತ್ ಬುಖಾರಿ ಕಾಶ್ಮೀರ, ಡಾ. ಫಾರೂಖ್ ನಈಮಿ, ಕೆ.ಎಂ. ಅಬೂಬಕರ್ ಸಿದ್ದೀಕ್, ಝುಹೈರುದ್ದೀನ್ ನೂರಾನಿ ಕೋಲ್ಕತಾ, ಸಾಲಿಕ್ ಲತೀಫಿ ಅಸ್ಸಾಮ್ ಮೊದಲಾದವರು ಮುನ್ನಡೆಸುವರು.

Leave a Reply

Your email address will not be published. Required fields are marked *

error: Content is protected !!