janadhvani

Kannada Online News Paper

ಎಸ್ ವೈ ಎಸ್,ಎಸ್ಸೆಸ್ಸೆಫ್ ಅಸೈ ಯುನಿಟ್-ಖಾಝಿ ಸ್ವೀಕಾರ ಸಮಾರಂಭ ಹಾಗೂ ಬುರ್ದಾ ಮಜ್ಲಿಸ್

ಈ ವರದಿಯ ಧ್ವನಿಯನ್ನು ಆಲಿಸಿ


ಕೊಣಾಜೆ:ಎಸ್ ವೈ ಎಸ್,ಎಸ್ಸೆಸ್ಸೆಫ್ ಹಿದಾಯತ್ ನಗರ ಅಸೈ ಇದರ ವತಿಯಿಂದ ಖಾಝಿ ಸ್ವೀಕಾರ ಸಮಾರಂಭ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಜ.17 ಗುರುವಾರ ಸಂಜೆ SჄS& SSF ಇದರ ಅಧೀನ ಸಂಸ್ಥೆ ಸ್ವಹಾಬ ಜುಮ್ಮಾ ಮಸ್ಜಿದ್ ಹಾಗೂ ಅಲ್ ಮದ್ರಸತುಲ್ ಜಮಾಲಿಯ್ಯ ಹಿದಾಯತ್ ನಗರ ಅಸೈ ಇದರ ಮೊಹಲ್ಲಾ ಖಾಝಿಯಾಗಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರು ಅಧಿಕಾರ ಸ್ವೀಕರಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್, ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್, ಸಯ್ಯಿದ್ ಶರಫುದ್ದೀನ್ ತಂಙಳ್, ಹುಸೈನ್ ಸಅದಿ ಕೆ.ಸಿ.ರೋಡು, ಜಿ.ಯಂ ಕಾಮಿಲ್ ಸಖಾಫಿ,ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಕೆ. ಎಂ ಸಿದ್ದೀಕ್ ಮೋಂಟುಗೋಳಿ, ಸಚಿವರಾದ ಯು.ಟಿ.ಖಾದರ್, ಝಮೀರ್ ಅಹ್ಮದ್ ಖಾನ್ ಹಾಗೂ ಹಲವಾರು ಉಲಮಾ ಉಮರಾ ಹಾಗೂ ರಾಜಕೀಯ ಶೈಕ್ಷಣಿಕ ನಾಯಕರು ಭಾಗವಹಿಸಲಿದ್ದಾರೆ.
ಸಂಜೆ 3:00 ಕ್ಕೆ ಅಸೈಗೋಳಿ ಜಂಕ್ಷನ್ ನಿಂದ ಅಸೈ ತನಕ ಸಯ್ಯಿದ್ ಕೂರತ್ತ್ ತಂಙಳ್ ರವರನ್ನು ಜಾಥಾ ಮೂಲಕ ಕರೆತರಲಾಗುವುದು.

ದಿನಾಂಕ 18-1-2019 ರಂದು ರಾತ್ರಿ ಗಂಟೆ 8 ಕ್ಕೆ ಸರಿಯಾಗಿ ಸಯ್ಯಿದ್ ತ್ವಾಹಾ ತಂಙಳ್ ಪೂಕಟ್ಟೂರ್ ನೇತೃತ್ವದ ತೈಬಾದಿಯಾ ತಂಡದಿಂದ ಬೃಹತ್ ಬುರ್ದಾ ಮಜ್ಲಿಸ್ ನಡೆಯಲಿದೆ.

error: Content is protected !! Not allowed copy content from janadhvani.com