ಮುಡಿಪು: ಹೊಸ ವರ್ಷಾಚರಣೆಯ ನೆಪದಲ್ಲಿ ದೇಶಾದ್ಯಂತ ಡಿಸೆಂಬರ್ 31 ರಂದು ಅತ್ಯಧಿಕ ಮದ್ಯ ಮಾರಾಟವಾಗುವುದು ಸಾಮಾನ್ಯ.ಆ ಹಿನ್ನೆಲೆಯಲ್ಲಿ ಮದ್ಯದಿಂದಾಗುವ ತೊಂದರೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದ ಎಲ್ಲಾ ಡಿವಿಷನ್ ಕೇಂದ್ರದ ಮುಖ್ಯ ಬೀದಿಗಳಲ್ಲಿ ಟೀಮ್ ಹಸನೈನ್ ಮದ್ಯ ವಿರುದ್ದ ವಿದ್ಯಾರ್ಥಿ ರ್ಯಾಲಿ ಹಾಗೂ ಡಿವಿಷನ್ ನ ಪ್ರಮುಖ ಪಟ್ಟಣಗಳಲ್ಲಿ ಮದ್ಯದ ವಿರುದ್ದ ಸಂದೇಶ ಭಾಷಣ ಮಾಡಲು ನಿರ್ದೇಶಿಸಿದ ಭಾಗವಾಗಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ನ ಎಸ್ಸೆಸ್ಸೆಫ್ ಟೀಮ್ ಹಸನೈನ್ ಮದ್ಯ ವಿರುದ್ದ ವಿದ್ಯಾರ್ಥಿ ರ್ಯಾಲಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಅಧ್ಯಕ್ಷತೆಯಲ್ಲಿ ಮುಡಿಪುವಿನಲ್ಲಿ ನಡೆಯಿತು.

ಸಂಬಾರ ತೋಟದಿಂದ ಮುಡಿಪು ಜಂಕ್ಷನ್ ತನಕ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಟೀಮ್ ಹಸನೈನ್ ಸಕ್ರೀಯ ಕಾರ್ಯಕರ್ತರಿಂದ ಮದ್ಯ ವಿರುದ್ದ ವಿದ್ಯಾರ್ಥಿ ರ್ಯಾಲಿ ನಡೆಯಿತು.

ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಟೀಮ್ ಹಸನೈನ್ ಗೈಡ್ ತೌಸೀಫ್ ಸ ಅದಿ ಹರೇಕಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ಮಾಡಿದರು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನಿರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಿದರು
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಸಯ್ಯದ್ ಖುಬೈಬ್ ತಂಙಳ್,ಜಮಾಲುದ್ದೀನ್ ಸಖಾಫಿ ಮುದುಂಗಾರುಕಟ್ಟೆ, ಎಸ್ಸೆಸ್ಸೆಫ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಕೋಶಾಧಿಕಾರಿ ಶರೀಫ್ ಮುಡಿಪು ,ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ,ಖತೀಬರಾದ ಅಬ್ದುಲ್ ರಹ್ಮಾನ್ ಮದನಿ ಮಧ್ಯನಡ್ಕ,ಆಸಿಫ್ ಸಖಾಫಿ ಮುಡಿಪು,ಡಿವಿಷನ್ ಸದಸ್ಯರಾದ ನೌಫಲ್ ಪರೀದ್ ನಗರ,ಇಕ್ಬಾಲ್ ಮಧ್ಯನಡ್ಕ,ಸಿದ್ದೀಕ್ ಸಖಾಫಿ ಕಾಯಾರ್,ಅಝೀಝ್ ಎಚ್.ಕಲ್,ಜಾಫರ್ ಅಳೇಕಲ,ಮೊಯಿದಿನ್ ಮೋರ್ಲ,ಶರೀಫ್ ಸ ಅದಿ ಸಂಬಾರತೋಟ,ಸಿದ್ದೀಕ್ ಕೊಮರಂಗಳ ಮೊದಲಾದವರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ ಸ್ವಾಗತಿಸಿದರು.ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ವಂದಿಸಿದರು.















ಇನ್ನಷ್ಟು ಸುದ್ದಿಗಳು
‘ಸಮಸ್ತ’: ಇತಿಹಾಸ ಮತ್ತು ವರ್ತಮಾನದ ನೆನಪುಗಳನ್ನು ಮೆಲುಕು ಹಾಕಿದ ನಾಯಕರು
ಅನಿವಾಸಿಗಳಿಗೆ ಭಾರಿ ಹೊಡೆತ; ಪಾಸ್ಪೋರ್ಟ್ ದರಗಳಲ್ಲಿ ಗಣನೀಯ ಹೆಚ್ಚಳ- ಪರಿಷ್ಕೃತ ಶುಲ್ಕ ಜುಲೈ 1 ರಿಂದ ಜಾರಿ
ಗಲ್ಫ್ ಸೇರಿದಂತೆ ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ‘ಏರ್ ಸುವಿಧಾ’ ಡಿಕ್ಲರೇಷನ್ ಕಡ್ಡಾಯ
ಪಾಸ್ಪೋರ್ಟ್ ಮತ್ತು ಪೌರತ್ವದ ವಿರೋಧಾಭಾಸ – ಜಗತ್ತಿಗೆ ಭಾರತೀಯ, ಸ್ವದೇಶದಲ್ಲೇ ಪ್ರಶ್ನಾರ್ಹ?
ಆಧಾರ್ ಮತ್ತು ಪಾಸ್ಪೋರ್ಟ್ ಪೌರತ್ವ ದಾಖಲೆಯಲ್ಲ: ಹಾಗಾದ್ರೆ ನಿಜವಾದ ದಾಖಲೆ ಯಾವುದು?
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ