janadhvani

Kannada Online News Paper

ಕೆಸಿಎಫ್ ಯು.ಎ.ಇ. ಗಲ್ಫ್ ಇಶಾರ 3ನೇ ವಾರ್ಷಿಕೋತ್ಸವ ಪ್ರಯುಕ್ತ ಪ್ರಬಂಧ ಸ್ಪರ್ಧೆ

ದುಬೈ:ಕರ್ನಾಟಕ ಕಲ್ಚರಲ್ ಫೌಂಡೇಶನ್ ಯು.ಎ.ಇ. ಗಲ್ಫ್ ಇಶಾರ 3ನೇ ವಾರ್ಷಿಕೋತ್ಸವ ಪ್ರಯುಕ್ತ ಸಾರ್ವಜನಿಕ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.

ವಿಷಯ: ಸಹಿಷ್ಣುತೆಯ ವರ್ಷ 2019 (year of tolerance)

ಪ್ರಥಮ ಬಹುಮಾನ: ₹10000 ರೂಪಾಯಿಗಳು.
ದ್ವಿತೀಯ ಬಹುಮಾನ: ₹ 5000 ರೂಪಾಯಿಗಳು

ನಿಯಮಗಳು:

  • ವಯೋಮಿತಿ ಇಲ್ಲ, ಸರ್ವರಿಗೂ ಮುಕ್ತ ಅವಕಾಶ.
  • ಬರಹ 2000 ಪದಗಳ ಮಿತಿಯೊಳಗಿರಬೇಕು.
  • ಪತ್ರಿಕೆಗಳಲ್ಲಿ ಅಥವಾ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಬರಹ ಪ್ರಕಟವಾಗಿರಬಾರದು. ಕೃತಿಚೌರ್ಯ ಅಥವಾ ಗೂಗಲ್ ಪ್ರತಿಯಾಗಿರಬಾರದು.
  • ಬರಹ ಇ-ಮೇಲ್ ಮೂಲಕ ಮಾತ್ರ ಕಳುಹಿಸತಕ್ಕದ್ದು.
  • Kcfuaenational@gmail.com
  • ಬರೆದವರ ಸ್ಪಷ್ಟ ವಿಳಾಸ ಕಾಂಟಾಕ್ಟ್ ನಂಬರ್ ನಮೂದಿಸಿರಬೇಕು.
  • ಪ್ರಬಂಧ ಕನ್ನಡ ಭಾಷೆಯಲ್ಲಾಗಿರಬೇಕು.
  • ಬರಹವನ್ನು PDF ಮಾಡಿ ಕಳುಹಿಸತಕ್ಕದ್ದು.
  • ನಗದು ಬಹುಮಾನವನ್ನು ಬ್ಯಾಂಕ್ ಅಕೌಂಟಿಗೆ ಕಳುಹಿಸಿಕೊಡಲಾಗುವುದು.
  • ಪ್ರಬಂಧ ಕಳುಹಿಸಲು ಕೊನೆಯ ದಿನಾಂಕ: 06/01/2019
  • ಪ್ರಥಮ ಸ್ಥಾನ ಪಡೆದ ಪ್ರಬಂಧವನ್ನು ಗಲ್ಫ್ ಇಶಾರದಲ್ಲಿ ಪ್ರಕಟಿಸಲಾಗುವುದು.

ಸಹಿಷ್ಣುತೆಯ ವರ್ಷ -2019

ಸಹಿಷ್ಣುತೆಯ ವರ್ಷ 2019!!! ಇಂದು ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ವಿಷಯವಾಗಿದೆ ಸಹಿಷ್ಣುತೆ. ಸೆಲೆಬ್ರಿಟಿಗಳು ರಾಜಕಾರಣಿಗಳು, ಚಿಂತಕರು, ಮಾಧ್ಯಮಗಳು ಎಲ್ಲಿ ನೋಡಿದರೂ ಅಸಹಿಷ್ಣುತೆಯ ಕೂಗು ಕೇಳಿಬರುತ್ತಿದೆ. ಸಹಿಷ್ಣುತೆ ಒಂದು ಸದ್ಗುಣ ಮತ್ತು ಇಸ್ಲಾಮಿಕ್ ಸಂಸ್ಕೃತಿಯ ಆಂತರಿಕ ಭಾಗವಾಗಿದೆ. ಇಸ್ಲಾಮಿನ ಪ್ರತಿಯೊಂದು ಹಂತಗಳಲ್ಲಿಯೂ ಸಹಿಷ್ಣುತೆಗೆ ಮಹತ್ತರವಾದ ಸ್ಥಾನಮಾನಗಳನ್ನು ಕಲ್ಪಿಸಿದೆ.

ಯು.ಎ.ಇ ಪಿತಾಮಹ ಶೈಖ್ ಝಾಯಿದ್ ಆಲ್ ನಹ್ಯಾನ್ ರವರು ಸಹಿಷ್ಣುತೆಯ ಪ್ರತಿಪಾದಕರಾಗಿದ್ದರು. ಅವರ ಸಹಿಷ್ಣುತೆಯ ಹೋರಾಟದ ಭಾಗವಾಗಿ ಯು.ಎ.ಇ ಸರಕಾರ ಡಿಸೆಂಬರ್ 15 ರಂದು “ಇಯರ್ ಒಫ್ ಟಾಲರನ್ಸ್” ಎಂಬ ಘೋಷಣೆಯಡಿಯಲ್ಲಿ ಜಾಗತಿಕ ಮಟ್ಟದಲ್ಲಿ ಸಹಿಷ್ಣುತೆಯ ಸಂದೇಶವನ್ನು ಸಾರುವ ಮಹತ್ವದ ಯೋಜನೆಯೊಂದನ್ನು ಘೋಷಿಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಿಷ್ಣುತೆಯ ಬಗ್ಗೆ ಅರಿವನ್ನು ಮೂಡಿಸಿ ಸಧೃಡ ಸಮಾಜವನ್ನು ಕಟ್ಟಿ ಬೆಳೆಸಲು ಈ ಅಭಿಯಾನ ಸಹಕಾರಿಯಾಗಲಿದೆ.

ಈ ಮಹತ್ವಪೂರ್ಣ ಈ ಯೋಜನೆಗೆ ಸಹಕಾರಿಯಾಗಿ ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆ ಕೆ.ಸಿ.ಎಫ್ ಪಬ್ಲಿಕೇಷನ್ ವಿಭಾಗ ಯು.ಎ.ಇ ಗಲ್ಫ್ ಇಶಾರದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ “ಸಹಿಷ್ಣುತೆಯ ವರ್ಷ 2019” ಎಂಬ ವಿಷಯದಲ್ಲಿ ಸಾರ್ವಜನಿಕ ಪ್ರಬಂಧ ಸ್ಪರ್ಧೆಯನ್ನು ಘೋಷಿಸಿ ದೇಶದೆಲ್ಲೆಡೆ ಸಹಿಷ್ಣುತೆಯನ್ನು ಮರುಸ್ಥಾಪಿಸಲು ಹೆಜ್ಜೆಯಿಟ್ಟಿದೆ.

“ಸಹಿಷ್ಣುತೆಯ ವರ್ಷ” ಈ ಪ್ರಬಂಧವು ನಾಲ್ಕು ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ:

💢ಸಹಿಷ್ಣುತೆಯ ಮೌಲ್ಯಗಳನ್ನು ಯುವಜನರಿಗೆ ಕಲಿಸುವ ಮೂಲಕ ಧರ್ಮಗಳ ನಡುವೆ ಸಹನೆ ಮತ್ತು ಸಹ-ಅಸ್ತಿತ್ವದ ಮೌಲ್ಯಗಳನ್ನು ಹೇಗೆ ಗಾಢವಾಗಿಸಬಹುದು?.
💢ವಿವಿಧ ಸಂಸ್ಕೃತಿಗಳು ಮತ್ತು ನಾಗರೀಕತೆಗಳ ನಡುವಿನ ಸರಣಿ ಕಾರ್ಯಕ್ರಮಗಳು, ಯೋಜನೆಗಳು ಮತ್ತು ಚರ್ಚೆಗಳ ಮೂಲಕ ಸಹಿಷ್ಣುತೆಗಾಗಿ ಯುವ ಸಮುದಾಯವನ್ನು ಹೇಗೆ ಪರಿವರ್ತಿಸಬಹುದು?.
💢 ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವುದರ ಮೂಲಕ ಸಹಿಷ್ಣುತೆಯ ಸಮುದಾಯವನ್ನು ಕಟ್ಟಿ ಬೆಳೆಸಲು ಧಾರ್ಮಿಕ ಭೋದನೆಗಳು ಯಾವ ರೀತಿ ಇರಬೇಕು?
💢ಸಹಿಷ್ಣುತೆಯನ್ನು ಉತ್ತೇಜಿಸಲು ಮಾಧ್ಯಮ ಉಪಕ್ರಮಗಳು ಮತ್ತು ಯೋಜನೆಗಳು ಯಾವ ರೀತಿ ಕಾರ್ಯನಿರ್ವಹಿಸಬಹುದು?

ಇನ್ನೂ ಹೆಚ್ಚಿನ ಮಾಹಿತಿಗಾಗಿ
00971553303840 ಸಂಪರ್ಕಿಸಿ.

ಪಬ್ಲಿಕೇಷನ್ ವಿಭಾಗ ಯು.ಎ.ಇ

error: Content is protected !! Not allowed copy content from janadhvani.com