janadhvani

Kannada Online News Paper

ಅನಿವಾಸಿ ಮದನಿಗಳಿಂದ ದುಬೈಯಲ್ಲಿ ತಾಜುಲ್ ಉಲಮಾ ಅನುಸ್ಮರಣೆ

ದುಬೈ: ಉಳ್ಳಾಲ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖಸಿ) ರವರ ಪಾದಸ್ಪರ್ಶದಿಂದ ಪುಣೀತಗೊಂಡ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನಲ್ಲಿ ಅರವತ್ತೈದು ವರ್ಷಗಳ ಕಾಲ ಪ್ರಾಂಶುಪಾಲರಾಗಿಯೂ ಸಾವಿರಾರು ಜಮಾಅತಿನ ಖಾಝಿಯಾಗಿ ಸೇವೆಗೈದ ಆಧ್ಯಾತ್ಮಿಕ ಲೋಕದ ಮಹಾನ್ ನಾಯಕ ಸಾದಾತ್ ಕುಟುಂಬದ ಧ್ರುವ ತಾರೆ ವಿದ್ವಾಂಸ ಲೋಕದ ರಾಜಕುಮಾರ ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ (ನ: ಮ) ರವರ ಅನುಸ್ಮರಣೆ ಹಾಗೂ ತಹ್ಲೀಲ್ ಸಮರ್ಪಣೆಯು ಇತ್ತೀಚೆಗೆ ದುಬೈಯ ಹೋರ್ ಅಲ್ ಅಂಸ್ ತಂಙಳ್ ಮಸ್ಜಿದ್ ನಲ್ಲಿ ಮದನೀಸ್ ಯುಎಇ ಅಧ್ಯಕ್ಷರಾದ ಹಾಜಿ ಇಬ್ರಾಹಿಮುಲ್ ಮದನಿ ಸಾಮಣಿಗೆಯವರ ನೇತೃತ್ವದಲ್ಲಿ ಜರುಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಮದನೀಸ್ ಯುಎಇ ಸಂಚಾಲಕ ಹುಸೈನ್ ಮದನಿ ಕಕ್ಕೆಪದವು ವಹಿಸಿದ್ದು, ಚಪ್ಪಾರಪಡವು ಮುಹಮ್ಮದ್ ಮದನಿ,ಕಾಸಿಮ್ ಮದನಿ ತೆಕ್ಕಾರ್, ಜಲೀಲ್ ಮದನಿ ವಾಮಂಜೂರು, ಇಬ್ರಾಹಿಂ ಮದನಿ ಉಳ್ಳಾಲ, ಮುಹಮ್ಮದ್ ಮದನಿ ಈಶ್ವರಮಂಗಳ, ಹಮೀದ್ ಸಖಾಫಿ, ನಿಸಾದ್ ಬುಖಾರಿ, ಮುಹಮ್ಮದ್ ಸಖಾಫಿ, ಇನ್ನಿತರು ತಾಜುಲ್ ಉಲಮಾರ ಮಹಿಮೆಯನ್ನು ವಿವರಿಸಿ ಮಾತನಾಡಿದರು.

ವೇದಿಕೆಯಲ್ಲಿ ಮದನೀಸ್ ಯುಎಇ ಪ್ರತಿನಿಧಿಗಳ ಸಮೇತ ಅನೇಕ ಕೆಸಿಎಫ್ ,ಐಸಿಎಫ್ ಕಾರ್ಯಕರ್ತರು ಉಲಮಾ, ಉಮರಾ, ಸಾದಾತುಗಳು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಮದನೀಸ್ ಯುಎಇ ಕಾರ್ಯದರ್ಶಿ ಅಝೀಝ್ ಮದನಿ ಪರಪ್ಪು ಸ್ವಾಗತಿಸಿ ಕೋಶಾಧಿಕಾರಿ ಇಲ್ಯಾಸ್ ಮದನಿ ಕಾಶಿಪಟ್ಣ ವಂದಿಸಿದರು.

error: Content is protected !! Not allowed copy content from janadhvani.com