janadhvani

Kannada Online News Paper

ಎಸ್ಸೆಸ್ಸೆಫ್ ಕೋಣಾಜೆ ಸೆಕ್ಟರ್ ನಿಂದ ಬೃಹತ್ ರಕ್ತದಾನ ಶಿಬಿರ

ಕೋಣಾಜೆ:ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೊ ಪ್ರಾಯೋಜಕತೆಯಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಹಾಗೂ ಎಸ್ಸೆಸ್ಸೆಫ್ ಕೋಣಾಜೆ ಸೆಕ್ಟರ್ ವತಿಯಿಂದ ವೆನ್ಲಾಕ್ ಆಸ್ಪತ್ರೆ ಮಂಗಳೂರು ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಎಸ್ಸೆಸ್ಸೆಫ್ ಕೋಣಾಜೆ ಸೆಕ್ಟರ್ ಅಧ್ಯಕ್ಷ ಜಲೀಲ್ ಫರೀದ್ ನಗರ ರವರ ಅಧ್ಯಕ್ಷತೆಯಲ್ಲಿ ನ್ಯೂಪಡ್ಪು ವಿನಲ್ಲ್ಲಿ ನಡೆಯಿತು.

ಬೆಳಿಗ್ಗೆ ನಡೆದ ಉದ್ಘಟನಾ ಸಭಾರಂಭವನ್ನು ಸಮಾಜ ಸೇವಕ ಹಾಜಬ್ಬ ಹರೇಕಳ ಉದ್ಘಾಟಿಸಿದರು.

ನ್ಯೂಪಡ್ಪು ಜುಮಾ ಮಸ್ಜಿದ್ ಖತೀಬ್ ಖಾಲಿದ್ ಮದನಿ ಕಲ್ಮಿಂಜ ದುಆ: ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯರೂ ಹಾಗೂ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋ ಇದರ ಜಿಲ್ಲಾ ಉಸ್ತುವಾರಿಯಾದ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ,ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸದಸ್ಯ ಸಯ್ಯದ್ ಖುಬೈಬ್ ತಂಙಳ್,ವೆನ್ಲಾಕ್ ಆಸ್ಪತ್ರೆ ವೈದ್ಯ ಆಂಟನಿ ಸರ್ ರವರು ಸಂದೇಶ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋ ಉಸ್ತುವಾರಿ ಕರೀಂ ಕೆದ್ಕಾರ್,ಹರೇಕಳ ಗ್ರಾಮ ಪಂಚಾಯತ್ ಸದಸ್ಯ ಸತ್ತಾರ್ ನ್ಯೂಪಡ್ಪು,ತ್ವಾಹಾ ಜುಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ನ್ಯೂಪಡ್ಪು,ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಬ್ಲಡ್ ಸೈಬೊ ಉಸ್ತುವಾರಿ ಇಲ್ಯಾಸ್ ಪೊಟ್ಟೊಳಿಕೆ ಹಾಗೂ ಹಕೀಂ ಪೂಮಣ್ಣ್, ಮುನೀರ್ ರಾಜಗುಡ್ಡೆ,ಉಬೈದ್ ಫರೀದ್ ನಗರ,ಅಬೂಸ್ವಾಲಿಹ್ ಹರೇಕಳ ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಕೋಣಾಜೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಫಲ್ ಫರೀದ್ ನಗರ ಸ್ವಾಗತಿಸಿ,ವಂದಿಸಿದರು.





error: Content is protected !! Not allowed copy content from janadhvani.com