ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಸೌದಿ ಅರೇಬಿಯಾ
ರಬೀವುಲ್ ಅವ್ವಲ್ 1440 ಪ್ರಯುಕ್ತ ಸೌದಿಯಾದ್ಯಂತ ವಿವಿಧ ಘಟಕಗಳಾದ ಯುನಿಟ್, ಸೆಕ್ಟರ್, ಝೋನ್, ರಾಷ್ಟ್ರೀಯ ಮಟ್ಟಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು, ಪ್ರತೀ ಘಟಕಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಲ್ಲಿ ವಿಜೇತರಾದವರು ಆಯಾ ಘಟಕಗಳ ಮೇಲ್ಘಟಕಗಳಲ್ಲಿ ಪ್ರಬಂಧ ಬರೆಯಲು ಅರ್ಹತೆ ಪಡೆದು, ಆಯಾ ಘಟಕಗಳ ಪ್ರಬಂಧ ಉಸ್ತುವಾರಿಗಳಿಗೆ ಪ್ರಬಂಧವನ್ನು ಬರೆದು ಸಲ್ಲಿಸಿದ್ದು, ಈಗಾಗಲೇ ಝೋನ್ ಮಟ್ಟದ ವರೆಗಿನ ಪ್ರಬಂಧ ಸ್ಪರ್ಧೆಯು ನಡೆದು ಫಲಿತಾಂಶವೂ ಪ್ರಕಟಗೊಂಡಿರುತ್ತದೆ. ಅಂತಿಮ ಘಟ್ಟವಾದ ರಾಷ್ಟ್ರೀಯ ಮಟ್ಟದಲ್ಲಿ 8 ಸ್ಪರ್ಧಾರ್ಥಿಗಳು ಬರೆಯಲು ಅರ್ಹತೆಯನ್ನು ಪಡೆದು, ಪ್ರಬಂಧ ಬರೆದು ಸಲ್ಲಿಸಿದ್ದು, ಬಹಳ ವ್ಯವಸ್ತಿತವಾಗಿ, ಪಾರದರ್ಶಕತೆಯಿಂದ ಸ್ಪರ್ಧೆಯು ನಡೆದು ಪರಿಣಿತ ತೀರ್ಪುಗಾರರ ಮೂಲಕ ಮೌಲ್ಯಮಾಪನ ನಡೆದು ಪ್ರಕಟಗೊಂಡ ಪಲಿತಾಂಶದಲ್ಲಿ ನಿಝಾಮ್ ಸಾಗರ್ ರಿಯಾದ್ ಝೋನಲ್ ಪ್ರಥಮ ಸ್ಥಾನವನ್ನು ಹಾಗೂ ಉಮರ್ ಗೇರುಕಟ್ಟೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆಂದು ಸೌದಿ ಕೆ.ಸಿಎಫ್ ಶಿಕ್ಷಣ ವಿಭಾಗದ ಪ್ರಕಟನೆ ತಿಳಿಸಿದೆ.
مبروك… 🌹 🌹 🌹 🌹