janadhvani

Kannada Online News Paper

ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಢರೇಶನ್ ಬೆಂಗಳೂರು ಜಯನಗರ ಡಿವಿಷನ್ ಮಹಾಸಬೆಯು ಸಾವೊರಿ ಹೋಟೆಲ್ ಮಡಿವಾಳದಲ್ಲಿ ನಡೆಯಿತು.

ಡಿವಿಷನ್ ಅಧ್ಯಕ್ಷ ಶಂಶುದ್ದೀನ್ ಅಝ್‌ಹರಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಕ್ಯಾಂಪಸ್ ಸೆಕ್ರೇಟರಿ ಶಬೀಬ್ ರವರು ಉದ್ಘಾಟಿಸಿದರು.ಕಾರ್ಯದರ್ಶಿ ಹೈದರ್ ರವರು ವಾರ್ಷಿಕ ವರದಿಯನ್ನೂ, ಕ್ಯಾಂಪಸ್ ಸೆಕ್ರೇಟರಿ ಫಾಯಿಝ್ ರವರು ಕ್ಯಾಂಪಸ್ ವರದಿಯನ್ನೂ ವಾಚಿಸಿದರು.ಕೋಶಾಧಿಕಾರಿ ಅಬ್ದುಲ್ ಖಾದರ್ ಲೆಕ್ಕಪತ್ರ ಮಂಡಿಸಿದರು. ಜಿಲ್ಲಾ ಉಪಾದ್ಯಕ್ಷ ಶಾಫಿ ಸ‌ಅದಿ ಮೆಜೆಸ್ಟಿಕ್ ರವರು ಸಂಘಟನಾ ತರಗತಿ ನಿರ್ವಹಿಸಿ ನೂತನ ಸಮಿತಿ ರಚನೆಗೆ ನೇತೃತ್ವ ನೀಡಿದರು.

ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ನಈಮಿ ಯಾರಬ್ ನಗರ,ಪ್ರಧಾನ ಕಾರ್ಯದರ್ಶಿಯಾಗಿ ಅಲ್ತಾಫ್ ಅಲಿ ಈಶ್ವರಮಂಗಳ ಕೋಶಾಧಿಕಾರಿಯಾಗಿ ನಜೀಬ್ ವೆಂಕಟಾಪುರ ಕ್ಯಾಂಪಸ್ ಸೆಕ್ರೇಟರಿಯಾಗಿ ಫಾಯಿಝ್ ಗೊಟ್ಟಿಗೆರೆ ಉಪಾಧ್ಯಕ್ಷರುಗಳಾಗಿ ಸಿದ್ದೀಖ್ ಸಖಾಫಿ ಯಾರಬ್ ನಗರ ,ಜಮಾಲ್ ಸಖಾಫಿ ಬಿಸ್ಮಿಲ್ಲಾ ನಗರ್ ಜೊತೆ ಕಾರ್ಯದರ್ಶಿಗಳಾಗಿ ಹೈದರ್ ಬಿಸ್ಮಿಲ್ಲಾನಗರ , ಶರೀಫ್ ಮಡಿವಾಳ ರವನ್ನೊಳಗೊಂಡ 17 ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಜಿಲ್ಲಾ ಉಪಾದ್ಯಕ್ಷ ಅನ್ವರ್ ಮುಸ್ಲಿಯಾರ್ ಮತ್ತು ಜಿಲ್ಲಾ ಕಾರ್ಯದರ್ಶಿ ಶಿಹಾಬ್ ಮಡಿವಾಳ ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದರು.

error: Content is protected !! Not allowed copy content from janadhvani.com