ಅಕೋಣಾಜೆ:ಫೆಬ್ರವರಿ 1,2,3 ರಂದು ನಡೆಯಲಿರುವ ಅಲ್- ಮದೀನಾ ಬೆಳ್ಳಿ ಹಬ್ಬ ಸಮ್ಮೇಳನದ ಯಶಸ್ವಿಯ ಬಗ್ಗೆ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವತಿಯಿಂದ ಪೂರ್ವ ಸಿದ್ದತಾ ಸಭೆಯು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿರವರ ಅಧ್ಯಕ್ಷತೆಯಲ್ಲಿ ಅಲ್- ಮದೀನಾ ಕ್ಯಾಂಪಸ್ ಮಂಜನಾಡಿಯಲ್ಲಿ ನಡೆಯಿತು.

ಅಲ್-ಮದೀನಾ ಶಿಲ್ಪಿ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅಲ್-ಮದೀನಾ ಬೆಳ್ಳಿ ಹಬ್ಬ ಸಮ್ಮೇಳನವನ್ನು ಯಶಸ್ವಿಗೊಳಿಸುವ ಬಗ್ಗೆ ಚರ್ಚಿಸಿ,ಯೂನಿಟ್,ಸೆಕ್ಟರ್ ಗಳಲ್ಲಿ ಪ್ಲೆಕ್ಸ್ ಹಾಕುವಂತೆಯು,ಅಲ್ಲದೇ ಅಲ್-ಮದೀನಾಗೆ ಡಿವಿಷನ್ ವತಿಯಿಂದ ಅಕ್ಕಿ,ತೆಂಗಿನಕಾಯಿಗಳ ಸಂದಲ್ ಜಾಥಾ ಹೋಗಲಿರುವುದರಿಂದ ಎಲ್ಲಾ ಸೆಕ್ಟರ್ ಸೆಕ್ಟರ್ ನಾಯಕರು ಸಹಕರಿಸುವಂತೆ ನಿರ್ದೇಶನ ನೀಡಲಾಯಿತು.

ಅಲ್-ಮದೀನಾ ಬೆಳ್ಳಿ ಹಬ್ಬದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ಜಿಲ್ಲಾ ನಾಯಕ ಸಯ್ಯದ್ ಖುಬೈಬ್ ತಂಙಳ್,ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ ಅಲ್-ಮದೀನಾ ಸಂಸ್ಥೆಯ ಕುರಿತು ಕಾರ್ಯಕರ್ತರಿಗೆ ಮಾಹಿತಿ ನೀಡಿ ಭಾಷಣ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕೋಶಾಧಿಕಾರಿ ಶರೀಫ್ ಮುಡಿಪು,ಅಲ್- ಮದೀನಾ ಮುದರಿಸ್ ಮಹಮ್ಮದ್ ಕುಂಞಿ ಅಂಜದಿ,ಜಾಫರ್ ಅಳೇಕಲ,ಇಲ್ಯಾಸ್ ಪೊಟ್ಟೊಳಿಕೆ,ಸಿದ್ದೀಕ್ ಕೊಮರಂಗಳ,ಅಲ್ತಾಫ್ ಶಾಂತಿಭಾಗ್,ಹಂಝ ಸುಂದರ್ ಬಾಗ್,ನೌಫಲ್ ಫರೀದ್ ನಗರ,ಉಬೈದ್ ಫರೀದ್ ನಗರ,ಮೊಯಿದಿನ್ ಮೋರ್ಲ,ಇರ್ಶಾದ್ ಮದನಿ ಮೊಂಟೆಪದವು,ಅಝೀಝ್ ಎಚ್.ಕಲ್,ಇಸ್ಮಾಯಿಲ್ ತಲಪಾಡಿ ಹಾಗೂ ಡಿವಿಷನ್,ಸೆಕ್ಟರ್ ನಾಯಕರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ ಸ್ವಾಗತಿಸಿ,ಕೊನೆಗೆ ವಂದಿಸಿದರು.
SSF ಕೊಟೆಕಾರ್ ಸೆಕ್ಟರ್ ಮಹಾಸಭೆ.29.12.201. 8.15 ಕ್ಕೆ ಕಂಝುಲ್ ಉಲೂಂ ಮದ್ರಸ ಹಾಲ್ ಕೊಮರಂಗಳ ನಡೆಯಲಿದೆ.