janadhvani

Kannada Online News Paper

ನಾಳೆ ಮಂಗಳೂರಿನಲ್ಲಿ ಇತಿಹಾಸ ನಿರ್ಮಸಲಿದೆ ‘ಕನೆಕ್ಟ್-2018’ ಸಾಮುದಾಯಿಕ ಸಮ್ಮಿಲನ

ನೇರ ಪ್ರಸಾರ: KSOCR Media

CONNECT -2018 MASS MARRIAGE PROGRAM

https://youtu.be/kvJWW3OjAN0a

‘CONNECT-2018’ GRAND COMMUNAL CONVERGENCE

https://youtu.be/_21_U_l9h6I

‘CONNECT-2018’ GRAND HUBBURASOOL CONFERENCE

Contact KSOCR Ⓜedia
Call & WhatsApp: +918762626236
Call📞 +919844602636


ಡಿಸೆಂಬರ್ 03 ದ.ಕ ಜಿಲ್ಲೆಯ ಜನರಿಗೆ ಅವಿಸ್ಮರಣೀಯ ದಿನ ಕಾರಣವೇನು?

ಮಲಯಾಳಂ ಡಿಕ್ಷನರಿಯಲ್ಲಿ ವಹ್ಹಾಬಿಸಂ ಎಂಬ ಪದಕ್ಕೆ ಮುಸ್ಲಿಮರೆಡೆಯಲ್ಲಿರುವ ಉಗ್ರವಾದಿಗಳು
ಎಂಬ ಅರ್ಥಕೊಟ್ಟಿದೆಯೆಂದು ಪೇರೋಡು ಉಸ್ತಾದರ ಪ್ರಭಾಷಣದಲ್ಲಿ ಕೇಳಿದ ನೆನಪು.

ಆದರೂ ಅವರು ಇಷ್ಟೊಂದು ತೀವ್ರವಾದಿಗಳಾಗಿ ಮಾರ್ಪಾಡುಗೊಳ್ಳುವರೆಂದು ನಾನು ಗ್ರಹಿಸಿರಲಿಲ್ಲ.

ಸಲಫಿಗಳು ಮುಸ್ಲಿಮರೆಡೆಯಲ್ಲಿ ಛಿದ್ರತೆ ಉಂಟು ಮಾಡಿದ್ದಾರೆಯಾದರೂ ಅವರ ನ್ನು ಉಗ್ರ ವಾದಿ ತೀವ್ರವಾದಿಯಾಗಿ ಬಿಂಬಿಸಬೇಕೆ? ಎಂದು ನನ್ನ ಮನಸ್ಸು ಅಂದು ತರ್ಕಿಸುತ್ತಿತ್ತು.
ಆದರೆ ಅದೇನೋ ನಮ್ಮ ಉಲಮಾಗಳ ಮಾತುಗಳು ಅತಿರೇಕ ಯಾವತ್ತೂ ಆಗಲ್ಲ.ಆಡಿದ ಮಾತಿಗೆ ತಿದ್ದುಡಿಯ ಅಗತ್ಯವೂ ಬರಲ್ಲ.

ಇಂದಿನ ಸಲಫಿಗಳ ಅಧೋಗತಿ ಕಾಣುವಾಗ ಪೇರೋಡು ಉಸ್ತಾದರ ಮಾತಿನ ಛಾಟಿಯಲ್ಲಿ ಅತಿರೇಕ ಎಳ್ಳಷ್ಟು ಇಲ್ಲ ಎಂಬುದನ್ನು ಸಲಫಿ ನಾಯಕನೇ ಒಪ್ಪಿಕೊಂಡ11:36 ಸೆಕೆಂಡಿನ ವಾಯ್ಸ್ .ಅಥವಾ
ರಹಸ್ಯ ಕ್ಲಿಪ್ ಸಮಾಜಿಕ ತಾಣದಲ್ಲಿ ಕಳೆದ ವರ್ಷ ವೈರಲಾಗಿತ್ತು.

ಮೊದಲೇ ಸತ್ತಂತಿರುವ ಸಲಫಿಸಂನ್ನು ಮತ್ತಷ್ಟು ರಕ್ತಸಿಕ್ತದ ಮಟಾಷ್ ಗೆ ಸದರಿ ವಾಯ್ಸ್ ತಲುಪಿಸಿತ್ತು.

ಕೇರಳದಿಂದ ISIS ಗೆ ಸೇರ್ಪಡೆಗೊಂಡು ಅಫಘಾನಿಸ್ತಾನ/ಯಮನ್ ರಾಷ್ಟ್ರಗಳಿಗೆ ಹಿಜಿರಾ ಹೋದ ಮರಿಸಳಪಿಗಳು ಅನಾಮಿಕರ ಗುಂಡಿಗೆ ಸತ್ತು ಅದಕ್ಕೆ ‘ಶಹೀದ್’ ಎಂಬ ಪಟ್ಟಕಟ್ಟಿ ವಿಜೃಂಭಿಸಿದ ವಾರ್ತೆ ಕೇಳಿದ್ದೇವೆ .

ಕುಟ್ಯಾಡಿ, ಮುಂತಾದ ಸ್ಥಳಗಳಲ್ಲಿರುವ ದರ್ಗಾಗಳನ್ನು ಪುಡಿಗೈದು ಧ್ವಂಸ ಮಾಡುವ ಕರಸೇವೆಯೆಂಬ ವಿದ್ವಂಸಕ ಚಟುವಟಿಕೆಗೆ ನೇತೃತ್ವ ಕೊಟ್ಟವರು ಸಳಫಿಗಳು.

ಅಮುಸ್ಲಿಮರೊಂದಿಗೆ ಮು ಗುಳ್ನಗೆ ಬೀರಬಾರದೆಂದು ಉಗ್ರ ಪ್ರಭಾಷಣ ಮಾಡಿದ ಸಲಫಿ ನಾಯಕ ಸಂಶುದ್ದೀನ್ ಮೌಲವಿ ಎಂಬಾತ ಈಗಲೂ ಕಂಬಿ ಎಣಿಸುತ್ತಿರಬಹುದು.

ಅಮುಸ್ಲಿಮರು ಆರಾಧಿಸುವ ದೇವದೇವತೆಗಳನ್ನು ಪರಿಹಾಸ್ಯ ಮಾಡುವ ಕರಪತ್ರ ಗಳನ್ನು ಮನೆಮನೆಗೆ ಹಂಚಿ ಹಿಂದೂಗಳಿಂದ ಗೂಸಾ ತಿಂದ ಪ್ರಕರಣ ಕೂಡಾ ಕಳೆದ ವರ್ಷ ಕೇರಳದಿಂದ ವರದಿಯಾಗಿತ್ತು.

ಅನ್ಯಧರ್ಮದವರ ಆರಾಧ್ಯವಸ್ತುಗಳನ್ನು ನಿಂದಿಸಬೇಡಿ ಎಂದು ಕುರಾನ್ ಸ್ಪಷ್ಟ ಪಡಿಸಿದ ನಂತರವೂ ಕುರಾನಿನ ಆದೇಶದ ವಿರುದ್ದ ಕರಪತ್ರ ಹಂಚುವ ಈ ಅವಿವೇಕಿ ಸಲಫಿಗಳ ಉಗ್ರವಾದದ ವಿರುದ್ದ ಗೂಸಾ ಹಾಕಿದ್ದನ್ನು ದೊಡ್ಡ ಇಶ್ಯು ಮಾಡಿದ ಮುಸ್ಲಿಂಲೀಗ್ ಎಂಬ ಸಮುದಾಯ ಪಕ್ಷಕ್ಕೆ ಕೇರಳ ವಿಧಾನ ಸಭೆಯಲ್ಲಿ ಮು ಖ್ಯಮಂತ್ರಿ ಪಿನರಾಯಿ ವಿಜಯನ್ ಧರ್ಮ ಧರ್ಮದ ನಡೆವೆ ಸ್ಪರ್ಧೆ ಉಂಟುಮಾಡುವ ಸಲಫಿಸಂ ನ್ನು ಬೆಂಬಲಿಸಿ ಶಾಂತಿಯ ಇಸ್ಲಾಮಿನ ಮುಖಕ್ಕೆ ಮಸಿಬಳಿಯಲು ನಿಮಗೆ ನಾಚಿಕೆಯಾಗಬೇಕೆಂದು ಛಾಟಿಯೇಟು ಬೀಸಿದಾಗ ವಹ್ಹಾಬಿ ನಾಯಕರಿಂದ ತುಂಬಿದ ಮುಸ್ಲಿಮ್ ಲೀಗ್ ಕೂಡಾ ತೆಪ್ಪಗೆ ಕೂರಬೇಕಾಯಿತು.

ಇಸ್ಲಾಮಿನ ಸುಂದರ ಮುಖಕ್ಕೆ ಮಸಿ ಬಳಿಯುವ ಅವಿವೇಕಿ ಸಲಪಿಗಳ ವಿರುದ್ದ ನಮ್ಮ ಉಲಮಾಗಳು ಯಾಕೆ ಇಷ್ಟು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಾಗಿದೆ ಇಂದಿನ ಸಲಫಿಗಳ ಡೋಲಾಯಮನ ಅವಸ್ಥೆ.

ಇದೀಗ ಕೇರಳದಿಂದ ನಮ್ಮ ಕರಾವಳಿಗೂ ಸಲಫಿ ಉಗ್ರವಾದ ಸಂಘಟನೆ ದಮ್ಮಾಜ್ ಗ್ರೂಪ್ ಎಂಟ್ರಿ ಕೊಟ್ಟಿದೆಯೆಂದು, ಅದರಲ್ಲಿ ಇನ್ಫೋಷೀಸ್ ಸಾಫ್ಟ್ ವೇರ್ ಇಂಜಿಯರಾಗಿದ್ದ ಯುವಕನೊಬ್ಬ ಸೇರಿದ್ದಾನೆಂದೂ ಬಿ ಸಿ ರೋಡ್, ಮಾರಿಪಳ್ಳ, ಕಲ್ಲಡ್ಕ ,ಉಳ್ಳಾಲ ಮುಂತಾದ ಕಡೆ ಅವರು ಬಿಡಾರ ಹೂಡಿದ್ದಾರೆಂದು ಸಲಫಿ ಮುಖಂಡ ಇಸ್ಮಾಈಲ್ ಶಾಫಿ ಎಂಬವನ ವಾಯ್ಸ್ ಕಳೆದ ವರ್ಷ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿತ್ತು.

ಉಗ್ರವಾದದ ತರಗತಿ ನಡೆಸಿಕೊಡಲು ಕಾಟಿಪಳ್ಳ ಸಲಾಂ ಪಳ್ಳಿಯ ಇಮಾಂ ಸೇರಿಂತೆ ಹಲವಾರು ಸಲಫಿ ಮುಲ್ಲಾಗಳು ಇದ್ದಾರೆಂಬ ಭಯಾನಕ ಮಾಹಿತಿ ರಹಸ್ಯ ವಾಯ್ಸ್ ಕ್ಲಿಪಿನಲ್ಲಿ ಇತ್ತು.

ಇವರಿಗೆಲ್ಲಾ ನಾಯಕತ್ವ ನೀಡಲು ಸಲಫಿಗಳ ಮುಖ್ಯ ಗುರುವಾಗಿದ್ದ ಜಕರಿಯ್ಯ ಸಲಾಹಿ ಬರುತ್ತಿದ್ದಾನೆಂಬ ಸ್ಪೋಟಕ ಮಾಹಿತಿ ಕೂಡಾ ಆ ವಾಯ್ಸ್ ಕ್ಲಿಪ್ ನಲ್ಲಿ ಇತ್ತು.

ಮಂಗಳೂರಿನ ಅಹ್ಲೇಹದೀಸ್ ಕಛೇರಿಯಲ್ಲೂ ಕೂಡಾ ಜಕರಿಯ್ಯ ತರಗತಿ ನಡೆಸಲು ಬರುತ್ತಿದ್ದಾನೆಂಬ ಮಾಹಿತಿ ಇಸ್ಮಾಈಲ್ ಶಾಫಿ ಹೆಸರಿನ ವಾಯ್ಸ್ ನಲ್ಲಿ ಇದೆ.

ಉಳ್ಳಾಲದಿಂದ ಓರ್ವ ಸಲಫಿ ಮಹಿಳೆ ಅಫಘಾನಿಸ್ತಾನಕ್ಕೆ ಹೋಗಿ ಅಲ್ಲಿಂದ ತಾನು ಶಹೀದ್ ಆಗಿ ಸ್ವರ್ಗಕ್ಕೆ ಹೋಗುವ ಸಂದೇಶ ಕೂಡಾ ರವಾನಿಸಿದ ವಿಷಯವನ್ನು ಅದರಲ್ಲಿ ಬಹಿರಂಗ ಪಡಿಸುತ್ತದೆ.
ಮಾತ್ರವಲ್ಲ ಎಂಜನೀಯರ್ ಸ್ಟೂಡೆಂಟ್ಸ್,ಮೆಡಿಕಲ್ ಸ್ಟೂಡೆಂ ಟ್ಸ್ ಸಹಿತ ಹಲವಾರು ಯುವಕ ಯುವತಿಯರು ತಮ್ಮ ಕಲಿಕೆಯನ್ನು ಅರ್ಧದಲ್ಲಿ ಮೊಟಕುಗೊಳಿಸಿ ಸಲಫಿಗಳ ಉಗ್ರವಾದ ಗ್ರೂಪಾದ ದಮ್ಮಾಜ್ ಗೆ ಸೇರುವ ಭಯಾನಕ ವಿಷಯಗಳನ್ನು ಸದರಿ ವಾಯ್ಸ್ ಸ್ಪಷ್ಟಪಡಿಸುತ್ತದೆ.

ಅವರ ಡ್ರೆಸ್ ಕೋಡ್ ಬದಲಾವಣೆಯಾಗುವುದನ್ನು ಕೂಡಾ ಸ್ಪಷ್ಟ ಪಡಿಸಿ ಅವರಿಗೆ ಯಾರೂ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಬಾರದು ಎಂದು ಸಲಫಿ ನಾಯಕ ಶಾಫಿ ಅಂಗಲಾಚುವ ವಾಯ್ಸ್ ಇತ್ತು.

ನಮ್ಮ ಉಲಮಾಗಳು ಅದೆಷ್ಟೋ ವರ್ಷಗಳ ಮುಂಚೆಯೇ ಫತ್ವಾ ಹೊರಡಿಸಿದ್ದರು ಸಲಫಿಗಳಿಗೆ ಯಾರೂ ಹೆಣ್ಣು ಕೊಟ್ಟು ಮದುವೆ ಮಾಡಿಸಬಾರದು ಅವರಿಗೆ ಸಲಾಂ ಕೂಡಾ ಹೇಳಬಾರದೆಂದು…
ಆದರೆ ಈ ಫತ್ವಾ ಸಮುದಾಯದ ಹಲವರ ಕಣ್ಣುಗಳನ್ನು ಕೆಂಪಾಗಿಸಿತ್ತು!

ಮುಸ್ಲಿಂ ಐಕ್ಯವೆಂಬ ನಾಟಕ ಲೇಬಲಿನಲ್ಲಿ ಸಲಫಿಗಳ ಬೆನ್ನು ಸವರುವ ಕಾಪಟ್ಯ ಈಗಲೂ ಕೆಲವರು ಮಾಡುತ್ತಿದ್ದಾರೆ.

ಸಲಫೀ ಮುಖಂಡನ ಹೆಣ್ಣುಕೊಡಬೇಡಿ ಎಂಬ ತಾಕೀತು ಅವರೆಲ್ಲರಿಗೂ ಎಚ್ಚರಿಕೆಯ ಘಂಟೆಯಾಗಿದೆ.

ಡ್ರೆಸ್ ಕೋಡ್ ಕೂಡಾ ಉಗ್ರವಾದದ ಸಂಕೇತವೆಂಬುದನ್ನು ಸಲಫಿ ಮುಖಂಡ ಒಪ್ಪಿಕೊಂಡಿದ್ದಾನೆ.

ನಮ್ಮ ಉಲಮಾಗಳು ಕೂಡ ಅದನ್ನೇ ಹೇಳುತ್ತಿದ್ದರು.ಸಲಫಿಗಳ ಗರಿಗೆದರಿದ ಗಡ್ಡ ಮೊಣಕಾಲಿನ ಪ್ಯಾಂಟ್(ಗಡ್ಡ ಮತ್ತು ಮೊಣಕಾಲಿನ ಮೇಲೆ ಧರಿಸುವ ವಸ್ತ್ರ ಇಸ್ಲಾಮಿಕ್ ಆದರೂ) ಸಲಫಿಗಳು ಧರಿಸುವಾಗ ಅದು ತೀವ್ರವಾದದ ಸಂಕೇತವಾಗಿ ಗೋಚರಿಸುತ್ತಿತ್ತು.

ನಮ್ಮ ಮುಸ್ಲಿಂ ಯುವಕರು ಎಚ್ಚೆತ್ತುಕೊಳ್ಳಬೇಕಾಗಿದೆ ಸಲಫಿಸಂನ ಹುಟ್ಟು ಉಗ್ರವಾದ ಭೀಕರವಾದದಿಂದಾಗಿದೆ ಎಂಬುದು ಚರಿತ್ರೆ. ಅದು ಅರೇಬ್ಯಾದ ನಜ್ದಿನಿಂದ ಆರಂಭವಾದ ಭೀಕರ ಸಂಘಟನೆ!

ಆ ಸವಕಲು ನಾಣ್ಯವನ್ನು ಕೇರಳಕ್ಕೆ ಆಮದು ಮಾಡಿದಾಗಲೇ ಅದರ ವಿರುದ್ದ ನಮ್ಮ ಉಲಮಾಗಳು ಸೆಟೆದೆದ್ದು ಪ್ರತಿಭಟಿಸಿದ್ದರು.
ಆದ್ದರಿಂದಲೇ ಸಲಫಿಸಂ ಇಂದು ಅಂತ್ಯ ಶ್ವಾಸ ಎಳೆಯುತ್ತಿದೆ.

ಇದೀಗ ಅದು ಪೂರ್ಣಾರ್ಥದಲ್ಲಿ ತೀವ್ರವಾದ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ.ಮುಸ್ಲಿಮ್ ಯುವಕರ ಬ್ರೈನ್ ವಾಶ್ ಮಾಡಿ ನರಕಕ್ಕೆ ತಳ್ಳುತ್ತಿದೆ!

ಓ ಯುವಕರೇ…..
ಓ ಮುಸ್ಲಿಮ್ ಸಮುದಾಯವೇ..

ನೀವೆಲ್ಲರೂ ಉಲಮಾಗಳ ಹಿಂದೆ ಬಂಡೆಗಲ್ಲಿನಂತೆ ನಿಂತುಕೊಳ್ಳಿರಿ…..

ಅವರನ್ನು ಹಿಂಬಾಲಿಸಿರಿ…

ಕ್ಷಣಿಕ ಆವೇಶಕ್ಕೆ ಬಲಿಯಾಗಿ ಸಮುದಾಯದ ನಾಶಕ್ಕೆ ನಿಮಿತ್ತವಾಗದಿರಿ…..

ಉಲಮಾಗಳು ಪ್ರವಾದಿಗಳ ಉತ್ತರಾಧಿಕಾರಿಗಳು ಎಂಬುದನ್ನು ಮರೆಯದಿರಿ…ಅವರು ನಿಮ್ಮನ್ನು ಸರಿಯಾದ ದಾರಿಯಲ್ಲಿ ಮುನ್ನೆಡೆಸುವರು.ಅವರು ಯಾವತ್ತು ಅವಿವೇಕವಾಗಿ ವರ್ತಿಸುವವರಲ್ಲ.ಅವರ ಮಾತುಗಳನ್ನು ನೀವು ಅವಿವೇಕವಾಗಿ ಕಾಣದಿರಿ.ಕಾರಣ ಅವರು ದುರದೃಷ್ಟಿಯಿಟ್ಟು ಪ್ರವಚನ ನೀಡುವರು ನಿಮಗದು ಕಹಿಯಾಗಿ ಕಾಣಬಹುದು ಆದರೆ ನಂತರ ಅದರಲ್ಲಿ ಸಿಹಿಯ ಅನುಭವ ಬಂದೇ ಬರುತ್ತದೆ. ಇನ್ಶಾಅಲ್ಲಾ….

ವಹ್ಹಾಬಿಸಂ ಮೌದೂದಿಸಂ ಸಲಫಿಸಂ ತಬ್ಲೀಗೀಸಂ ಎಲ್ಲವೂ ಉಗ್ರವಾದ ಭೀಕರವಾದದ ವಿವಿಧ ಮುಖಗಳು. ದಯವಿಟ್ಟು ಯಾರೂ ಕೂಡಾ ಅದರಲ್ಲಿ ಇಸ್ಲಾಮನ್ನು ದರ್ಶಿಸಲು ಪ್ರಯತ್ನ ಮಾಡದರಿ….

ಅಲ್ಲಾಹು ಅನುಗ್ರಹಿಸಲಿ.

✍ಸುಸಾಮ

error: Content is protected !! Not allowed copy content from janadhvani.com