ಮರ್ಹೂಂ ರಫೀಖ್ ಸಖಾಫಿ ಅನುಸ್ಮರಣಾ ಸಮ್ಮೇಳನ ನ.16 ಮಿತ್ತೂರಿನಲ್ಲಿ

ಎಸ್ಸೆಸ್ಸೆಫ್ ರಾಜ್ಯ ನಾಯಕ, ಕೊಡಗು ನಿಕಟಪೂರ್ವ ಜಿಲ್ಲಾಧ್ಯಕ್ಷ *ಮರ್ಹೂಂ ರಫೀಖ್ ಸಖಾಫಿ ಚೆರಿಯಪರಂಬು* ರವರ *ಅನುಸ್ಮರಣಾ ಸಮ್ಮೇಳನ* ನವಂಬರ್ 16 ಶುಕ್ರವಾರ ಮಧ್ಯಾಹ್ನ 3ಗಂಟೆಗೆ ಮಿತ್ತೂರು KGN ಸಭಾಂಗಣದಲ್ಲಿ ನಡೆಸಲು ಇಂದು ಮರ್ಕಝುಲ್ ಹಿದಾಯ ಕೊಟ್ಟಮುಡಿಯಲ್ಲಿ ನಡೆದ ಸಂತಾಪ ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರಮುಖ ಸಾದಾತುಗಳು, ಉಲಮಾ ಉಮರಾ ನಾಯಕರು, ಸಂಘಟನಾ ನಾಯಕರು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಮೌಲಾನಾ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ KM ಸಿದ್ದೀಖ್ ಮೋಂಟುಗೋಳಿ,
ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಹಫೀಲ್ ಸಅದಿ, ರಾಜ್ಯ ಕೋಶಾಧಿಕಾರಿ ಶರೀಫ್ ಬೆಂಗಳೂರು, ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ, ರಾಜ್ಯ ನಾಯಕರಾದ ಇಸ್ಮಾಯಿಲ್ ಮಾಸ್ಟರ್ ಮೋಂಟೆಪದವು,ಇಸ್ಮಾಯಿಲ್ ಝೈನಿ, ಯಾಕೂಬ್ ಮಾಸ್ಟರ್, ಅಡ್ವಕೇಟ್ ಶಾಕಿರ್ ಹಾಜಿ ಸಭೆಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!