janadhvani

Kannada Online News Paper

ಕೆಸಿಎಫ್ ದುಬೈ ನಾರ್ತ್ ಝೋನ್ ಬೃಹತ್ ಮೀಲಾದ್ ಸಮಾವೇಶದ : ಕರಪತ್ರ ಬಿಡುಗಡೆ.

ಈ ವರದಿಯ ಧ್ವನಿಯನ್ನು ಆಲಿಸಿ


ದುಬೈ : ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದುಬೈ ನಾರ್ತ್ ಝೋನ್ ವತಿಯಿಂದ
‘ಓ ಸಂದೇಶವಾಹಕರೇ ತಮ್ಮಡೆಗೆ’ ಎಂಬ ಘೋಷವಾಕ್ಯದಡಿಯಲ್ಲಿ ನಡೆಸಲ್ಪಡುವ ಬೃಹತ್ ಮೀಲಾದ್ ಸಮಾವೇಶವು ಇದೇ ಬರುವ ನವಂಬರ್ 16 ರಂದು ಶುಕ್ರವಾರ ಸಂಜೆ 6 ಗಂಟೆಗೆ ಸರಿಯಾಗಿ ಅಲ್ ಕಿಸೈಸ್ ಸ್ಟೇಡಿಯಂ ಮೆಟ್ರೋ ಸ್ಟೇಷನ್ ಸಮೀಪವಿರುವ ಕ್ರಸಂಟ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ .

ಪ್ರಸ್ತುತ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಘಲ್ ಕೂರತ್ ದುವಾಶೀರ್ವಚನಗೈಯ್ಯಲಿರುವರು.
ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣಗೈಯ್ಯಲಿದ್ದು
ಹಾಗೂ ಇನ್ನಿತರ ಹಲವಾರು ಉಲಮಾ, ಉಮರಾ ನಾಯಕರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಕರಪತ್ರ ವನ್ನು ಪ್ರದರ್ಶಿಸುವುದರ ಮೂಲಕ ಬಿಡಗಡೆಗೊಳಿಸಲಾಯಿತು.
ಸ್ವಾಗತ ಸಮಿತಿ ಚೆಯರ್ಮಾನ್ ಅಬೂಬಕ್ಕರ್ ಹಾಜಿ ಕೊಟ್ಟಮುಡಿಯವರು ರಶೀದ್ ಕೈಕಂಬರವವರಿಗೆ ನೀಡುವುದರ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
ಅಬ್ದುಲ್ ಜಲೀಲ್ ನಿಝಾಮಿ,ಅಬ್ದುಲ್ ರಝಾಕ್ ಹಾಜಿ ಜೆಲ್ಲಿ , ಅಬ್ದುಲ್ ಅಝೀಝ್ ಲತೀಫಿ, ಅಬ್ದುಲ್ ಖಾದರ್ ಸಾಲೆತ್ತೂರ್, ರಫೀಕ್ ಕಲ್ಲಡ್ಕ, ರಹೀಂ ಕೋಡಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com