ಮಾಣಿ : ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಇದರ ವತಿಯಿಂದ ಡಿಸೆಂಬರ್ 8 ರಂದು ನಡೆಯುವ ಬೃಹತ್ ಹುಬ್ಬರ್ರಸೂಲ್ ಕಾನ್ಫರೆನ್ಸ್ ಗೆ ಸ್ವಾಗತ ಸಮಿತಿಯನ್ನು ಮಾಣಿ ದಾರುಲ್ ಇರ್ಶಾದ್ ನಲ್ಲಿ ನಡೆದ ಸಭೆಯಲ್ಲಿ ಜಿ ಎಂ ಕಾಮಿಲ್ ಸಖಾಫಿಯವರ ನೇತ್ರತ್ವದಲ್ಲಿ ರಚಿಸಲಾಯಿತು, ಚೆಯರ್ ಮ್ಯಾನ್ ಆಗಿ ಅಬ್ದುಲ್ ಹಮೀದ್ ಸತ್ತಿಕ್ಕಲ್,ಕನ್ವೀನರ್ ಆಗಿ ಅಶ್ರಫ್ ವಳಚ್ಚಿಲ್ ಕೆಮ್ಮಾನ್,ಕೋಶಾಧಿಕಾರಿಯಾಗಿ ಅಬ್ದುರ್ರಹ್ಮಾನ್ ಬುಡೋಳಿ ಹಾಗೂ ಸಮಿತಿ ಸದಸ್ಯರಾಗಿ ಸೆಕ್ಟರ್ ಕಾರ್ಯಕಾರಿಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು,ಸೆಕ್ಟರ್ ಅಧ್ಯಕ್ಷ ಹಾಫಿಳ್ ತೌಸೀಫ್ ಕೆಮ್ಮಾನ್ ಸ್ವಾಗತಿಸಿದರು,ಸ್ವಾದಿಖ್ ಮುಈನೀ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು,ವೇದಿಕೆಯಲ್ಲಿ ಹಾರಿಸ್ ಮದನಿ ಪಾಟ್ರಕೋಡಿ,ನಝೀರ್ ಅಮ್ಜದಿ ಮಾಣಿ,ರಫೀಕ್ ಮದನಿ ಪಾಟ್ರಕೋಡಿ,ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ ಮುಂತಾದ ಗಣ್ಯರು ಉಪಸ್ಥಿತರಿದ್ದರು, ಮುಸ್ತಫಾ ಬುಡೋಳಿ ಧನ್ಯವಾದಗೈದರು.