ವಿಶ್ವಾಸ ಗಟ್ಟಿ ಗೊಳಿಸಲು ಪ್ರಯತ್ನಿಸಬೇಕು: ಅಸ್ಸಯ್ಯಿದ್ ಕೂರತ್ ತಂಙಳ್

ಇಹದ ಮೋಹದ ಹಿಂದೆ ಬಿದ್ದು ಪರಲೋಕ ನಷ್ಟಪಡಿಸಬೇಡಿ, ಈಮಾನ್ ಗಟ್ಟಿಗೊಳಿಸಿ ಹಾಗಿದ್ದರೆ ಮಾತ್ರ ಪರಲೋಕದಲ್ಲಿ ಜಯಗೊಳಿಸಬಹುದು ಎಂದು ದ.ಕ.ಜಿಲ್ಲಾ ಸಂಯುಕ್ತ ಖಾಝಿ ಅಸ್ಸಯ್ಯಿದ್ ಕೂರತ್ ತಂಙಳ್ ಹೇಳಿದರು.


SSF ಚಿಕ್ಕಮಗಳೂರು ಶಾಂತಿನಗರ ಯುನಿಟ್ ಸಮ್ಮೇಳನದ ಲ್ಲಿ ದುಆ ಗೆ ನೇತ್ರತ್ವ ವಹಿಸಿ ಮಾತನಾಡುತ್ತಿದ್ದರು.
ಸ್ಥಳೀಯ ಯುನಿಟ್ ಅಧ್ಯಕ್ಷ, ಚಿಕ್ಕಮಗಳೂರು ಜಿಲ್ಲಾ ಪ್ರ.ಕಾರ್ಯದರ್ಶಿ ಮುಸ್ತಫಾ ಝುಹ್ರಿ ಅಧ್ಯಕ್ಷತೆ ವಹಿಸಿದರು. ಅಶ್ರಫ್ ಲತೀಫಿ ಶಾಂತಿನಗರ ಉದ್ಘಾಟನೆ ಗೈದರು. SSF ರಾಜ್ಯ ಸದಸ್ಯ ಹುಸೈನ್ ಸ ಅದಿ ಹೊಸ್ಮಾರು ಮುಖ್ಯ ಪ್ರಭಾಷಣ ಗೈದರು.


ಉಪ್ಪಳ್ಳಿ ಮುದರ್ರಿಸ್ ಶರಪುದ್ದೀನ್ ಸಅದಿ, SJM ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ಇಬ್ರಾಹಿಂ ಸಅದಿ, ಡಿವಿಶನ್ ಅಧ್ಯಕ್ಷ ರಫೀಖ್ ಸಖಾಫಿ, ಕಲಂದರ್ ಸಖಾಫಿ, ಅಬೂಸ್ವಾಲಿಹ್ ಸಖಾಫಿ, ಶೌಕತ್ ಅಲೀ ಶಾಂತಿನಗರ, ಯೂಸುಫ್ ಹಾಜೀ ಉಪ್ಪಳ್ಳಿ, ಅಝೀಝ್ ಕರಾವಳಿ, ಇಸ್ಮಾಯಿಲ್ ಲತೀಫೀ ಬದ್ರಿಯ್ಯ, ಶಾಹುಲ್ ಹಮೀದ್ ಸಖಾಫಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!