janadhvani

Kannada Online News Paper

SSF ತುಂಬೆ ಶಾಖೆ ವತಿಯಿಂದ ಬ್ರಹತ್ ಸಂಘಟನಾ ತರಗತಿ

ಕರ್ನಾಟಕ ರಾಜ್ಯದಾದ್ಯಂತ ನಂ.1 ರಿಂದ 15 ತನಕ ನಡೆಯುವ SSF ಸದಸ್ಯತನದ ಅಂಗವಾಗಿ SSF ತುಂಬೆ ಶಾಖೆ ವತಿಯಿಂದ 29-10-2018 ಸೋಮವಾರ ಇಶಾ ನಮಾಝಿನ ಬಳಿಕ ಶಾಖಾ ಉಪಾಧ್ಯಕ್ಷರಾದ ಹಾಜಿ!ಅಬ್ದುಲ್ ಲತೀಫ್ ಹಿಮಮಿಯರ ಅದ್ಯಕ್ಷತೆಯಲ್ಲಿ ತುಂಬೆ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಕಲ್ಚರಲ್ ಸೆಂಟರಿನಲ್ಲಿ ಬ್ರಹತ್ ಸಂಘಟನಾ ತರಗತಿಯನ್ನು ಕೆ.ಜಿ.ಎನ್ ಮಿತ್ತೂರು ದಹ್ವ ಕಾಲೇಜ್ ಮುದರ್ರಿಸರಾದ ಬಹು!ಹುಸೈನ್ ಅಹ್ಸನಿ ಅಲ್-ಮುಈನಿ ಸಂಘಟನೆಯ ಅನಿವಾರ್ಯತೆ ಹಾಗು ಮಹತ್ವ ಎಂಬ ವಿಷಯದಲ್ಲಿ ಮುಖ್ಯ ತರಗತಿ ನಡೆಸಿದರು.

ಪ್ರಸುತ ಈ ಸಂದರ್ಭದಲ್ಲಿ SSF ತುಂಬೆ ಶಾಖಾ ಉಪಾಧ್ಯಕ್ಷರಾದ ಜನಾಬ್!ಹನೀಫ್ ಎಂ.ಎ,ಕೋಶಾಧಿಕಾರಿ ಇಬ್ರಾಹಿಂ,ಸಂಘಟನಾ ಸಲಹೆಗಾರ ಅದಂ ಟಿ.ಎ,ಜೊತೆ ಕಾರ್ಯದರ್ಶಿ ಆಮೀನ್ ಟಿ.ಎ,ಫಯಾಝ್.ಬಿ ಹಾಗು ಪದಾಧಿಕಾರಿಗಳು ಹಲವಾರು ಸಂಘಟನಾ ಕಾರ್ಯಕರ್ತರು ಉಪಸ್ಥರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಶಾಖಾ ಪ್ರ.ಕಾರ್ಯದರ್ಶಿ ನೌಷದ್ ತುಂಬೆ ವಂದಿಸಿದರು.

ವರದಿ:-
ಇರ್ಫಾಝ್ ತುಂಬೆ

error: Content is protected !! Not allowed copy content from janadhvani.com