ಸಾಮಾಜಿಕ ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯ ಸಾನಿಧ್ಯವಾಗಿದ್ದ ಹಾಜಿ ಬಿ ಎಂ ಮುಮ್ತಾಝ್ ಅಲೀ ಅವರ ನಿಧನಕ್ಕೆ ಸಂತಾಪ ಸೂಚಿಸಲು ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳುವ ಸಲುವಾಗಿ ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ. ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಉಸ್ತಾದ್ ಅವರು ನಾಳೆ (9/10/2024 ಬುಧವಾರ) ಬೆಳಗ್ಗೆ 11.30ಕ್ಕೆ ಕೃಷ್ಣಾಪುರ, ಚೊಕ್ಕಬೆಟ್ಟು ಮುಮ್ತಾಝ್ ಅಲಿ ಅವರ ತರವಾಡು ಮನೆಗೆ ಆಗಮಿಸಲಿದ್ದಾರೆ,
ಮೃತರ ಮೂರನೇ ದಿನದ ಪ್ರಾರ್ಥನಾ ಸಂಗಮಕ್ಕೆ ನೇತೃತ್ವ ನೀಡಲಿರುವ ಅವರು ಬಳಿಕ, ಮುಮ್ತಾಝ್ ಅಲೀ ಅಧ್ಯಕ್ಷರಾಗಿದ್ದ, ತಾನು ಮುಖ್ಯ ಪೋಷಕ ಆಗಿರುವ, ಕಾಟಿಪಳ್ಳ ‘ಮಿಸ್ಬಾಹ್ ನಾಲೆಜ್ ಫೌಂಡೇಶನ್’ ನ ವಿಶೇಷ ಸಭೆಗೆ ನೇತೃತ್ವ ಕೊಡಲಿದ್ದಾರೆಂದು ಮಿಸ್ಬಾಹ್ ಸಮೂಹ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಡಾ ಎಮ್ಮೆಸ್ಸೆಂ. ಝೖನೀ ಕಾಮಿಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ