ವಿಟ್ಲ : ಯುವತ್ವವೆಂಬುದು ಮನುಷ್ಯನ ಜೀವಿತಾವದಿಯ ಪ್ರಧಾನ ಘಟ್ಟವಾಗಿದ್ದು, ಅದು ಕಳೆದು ಹೋದರೆ ಮರಳಿಪಡೆಯಲು ಸಾದ್ಯವಿಲ್ಲ. ಯವ್ವನದ ಅಮೂಲ್ಯ ಸಮಯವನ್ನು ಯುವಕ ಯುವತಿಯರು ಅನಾವಶ್ಯಗಳಿಗೆ ವಿನಿಯೋಗಿಸದೆ ಒಳಿತಿನ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮಾದರಿಯಾದ ಜೀವನ ಸಾಗಿಸಬೇಕೆಂದು, ಮೈದಾನಿಮೂಲೆ ಮಸ್ಜಿದ್ ಖತೀಬರೂ, ಖ್ಯಾತ ಸುನ್ನೀ ಬರಹಗಾರರಾದ ಅಬೂಶಝ ಅಬ್ದುಲ್ ರಝಾಕ್ ಅಲ್ ಖಾಸಿಮಿ ಅವರು ಹೇಳಿದರು
ಅವರು ಟಿಪ್ಪುನಗರ ದಾರುನ್ನಜಾತ್ ಸಭಾಂಗಣದಲ್ಲಿ ಎಸ್ಎಸ್ಎಫ್ ಟಿಪ್ಪುನಗರ ಶಾಖೆ ಹಮ್ಮಿಕೊಂಡ ಯೂನಿಟ್ ಕಾನ್ಫರೆನ್ಸ್ ನಲ್ಲಿ ನವೆಂಬರ್ 1-15 ರವರೆಗೆ ನಡೆಯುವ SSF ಸದಸ್ಯತನ ಅಭಿಯಾನದ ಧ್ಯೇಯವಾಕ್ಯವಾದ ಯೌವ್ವನ ಮರೆಯಾಗುವ ಮುನ್ನ ಎಂಬ ವಿಷಯವನ್ನು ಕೇಂದ್ರೀಕರಿಸಿ ಮುಖ್ಯ ಭಾಷಣ ಮಾಡುತ್ತಿದ್ದರು ದಾರುನ್ನಜಾತ್ ಸಂಸ್ಥೆಯ ಸಾರಥಿ ಅಬೂಬಕ್ಕರ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದಾರುನ್ನಜಾತ್ ಮುದರ್ರಿಸ್ ಎ.ಪಿ ಅಬೂಬಕ್ಕರ್ ಸಖಾಫಿ ಕಲ್ಮಿಂಜ ಉದ್ಘಾಟಿಸಿದರು ಅಲ್-ಹಾಜ್ ಕೆ.ಎ ಮಹ್ಮೂದುಲ್ ಫೈಝಿ ವಾಲೆಮೊಂಡವು ಉಸ್ತಾದ್ ದುಅ ನಡೆಸಿಕೊಟ್ಟರು.
SMA ಪುತ್ತೂರು ಜಿಲ್ಲಾಧ್ಯಕ್ಷರೂ, ದಾರುನ್ನಜಾತ್ ಸಂಸ್ಥೆಯ ಪ್ರ.ಕಾರ್ಯದರ್ಶಿಯಾದ ಕೆ.ಎ ಹಮೀದ್ ಹಾಜಿ ಕೊಡಂಗಾಯಿ ಪ್ರಸ್ತಾವಿಕವಾಗಿ ಮಾತನಾಡಿದರು ದಾರುನ್ನಜಾತ್ ಮಹಿಳಾ ಶರೀಅತ್ ಕಾಲೇಜಿನ ಪ್ರಿನ್ಸಿಪಾಲ್ ಅಬ್ದುಲ್ ಖಾದರ್ ಫೈಝಿ ಹಾಗೂ SSF ವಿಟ್ಲ ಡಿವಿಷನ್ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ಸಖಾಫಿ ಕೆಲಿಂಜ ಕಾರ್ಯಕ್ರಮದಲ್ಲಿ ಮಾತನಾಡಿದರು ಈ ಸಂದರ್ಭದಲ್ಲಿ ಸದರ್ ಮುಅಲ್ಲಿಂ ಹಾಗೂ ಪುತ್ತೂರು ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಸಅದಿ ಕೊಡಿಪ್ಪಾಡಿ, ಮುಅಲ್ಲಿಂ ಹಾಫಿಳ್ ಶರೀಫ್ ಮುಸ್ಲಿಯಾರ್, ವಿಟ್ಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಖ್ ಪೆಲ್ತಡ್ಕ, SMA ವಿಟ್ಲ ರೀಜನಲ್ ಅಧ್ಯಕ್ಷರಾದ ಹಾಜಿ ಉಸ್ಮಾನ್ ಟಿಪ್ಪುನಗರ, ವಿಟ್ಲ ಸೌತ್ ಸೆಕ್ಟರ್ ಅಧ್ಯಕ್ಷರಾದ ಸಿ.ಹೆಚ್. ಅಬ್ದುಲ್ ಖಾದರ್ ಕೊಡಂಗಾಯಿ, SSF ಟಿಪ್ಪುನಗರ ಅಧ್ಯಕ್ಷರಾದ ಲತೀಫ್, ಸುನ್ನೀ ಸಂಘಟನೆಗಳ ಪ್ರಮುಖರಾದ ಮೂಸ ಹಾಜಿ ಕಲ್ಮಿಂಜ, ಇಬ್ರಾಹಿಂ(ಮೋನು), ಹೈದರ್ ಅಳಕೆಮಜಲು, ರಝಾಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು ಇಬ್ರಾಹಿಮ್ ಮುಸ್ಲಿಯಾರ್ ಸ್ವಾಗತಿಸಿ, ಅಶ್ಫಾಕ್ ಟಿಪ್ಪುನಗರ ವಂದಿಸಿದರು