ದೇರಳಕಟ್ಟೆ: ಎಸ್ ಎಸ್ ಎಫ್ ಕಾನೆಕೆರೆ ಶಾಖೆ ವತಿಯಿಂದ “ಯವ್ವನ ಮರೆಯಾಗುವ ಮುನ್ನ” ಯುನಿಟ್ ಕಾನ್ಫರೆನ್ಸ್ ಕಾನೆಕೆರೆ ತರ್ಬಿಯತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಶಾಖಾಧ್ಯಕ್ಷ ರಫೀಕ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.ರಾಜ್ಯ ಇಹ್ಸಾನ್ ನಾಯಕರಾದ ವಿ.ಯು.ಇಸ್ಹಾಖ್ ಝುಹುರಿ ಸೂರಿಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯವ್ವನವು ಇಸ್ಲಾಮಿನ ಹಾದಿಯಲ್ಲಿ ಸಾಗಲಿ ಎಂಬ ವಿಷಯದಲ್ಲಿ ಬಶೀರ್ ಮದನಿ ಕೂಳೂರು ಮುಖ್ಯ ಭಾಷಣ ಮಾಡಿದರು.
ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಫಾಝ್ ಸ್ವಾಗತಿಸಿ, ಸಾಜಿದ್ ಹಿಮಮಿ ಅಝ್ಹರಿ ವಂದಿಸಿದರು.