ಕೊಡಗು ಜಿಲ್ಲೆಯ ಪ್ರಪ್ರಥಮ ಸಮನ್ವಯ ವಿಧ್ಯಾಕೇಂದ್ರ ಅನ್ವಾರುಲ್ ಹುದಾ ಇದರ ವಿದ್ಯಾರ್ಥಿ ಸಂಘಟನೆಯಾದ ನಹ್ಧತುಸ್ಸುನ್ನ ಸ್ಟೂಡೆಂಟ್ ಅಸೋಸಿಯೇಶನ್(NSSA) ನೂತನ ಕಛೇರಿ ಉದ್ಘಾಟನೆಯನ್ನು ಸಂಸ್ಥೆಯ ಸಾರಥಿ ಶೈಖುನಾ ಅಹ್ಸನಿ ಉಸ್ತಾದರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಉಸ್ತಾದ್ ಅಬ್ದುರ್ರಷೀದ್ ಸಅದಿ ಸಂಘಟನೆಯ ನಿರ್ದೇಶಕರಾದ ಉಸ್ತಾದ್ ಇಸ್ಮಾಯಿಲ್ ಸಖಾಫಿ ಮುದರ್ರಿಸರಾದ ಉಸ್ತಾದ್ ಶಫೀಕ್ ಸಖಾಫಿ, ಉಸ್ತಾದ್ ಅಬ್ದುರ್ರಹ್ಮಾನ್ ಅಹ್ಸನಿ, ಜಲೀಲ್ ಸಖಾಫಿ,ಜಲೀಲ್ ಅಮೀನಿ,ಶಾಫಿ ಅನ್ವಾರಿ,ಕಮರುದ್ದೀನ್ ಅನ್ವಾರಿ ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಹ್ಳರತುಲ್ ಬದ್ರಿಯಾದೂಂದಿಗೆ ಕಾರ್ಯಕ್ರಮವನ್ನು ಪ್ರಾರಂಬಿಸಿ ಸಹಕರಿಸಿದ ಸರ್ವರಿಗೂ ದುಆ ನೆರವೇರಿಸಿದರು. SSF ಜಿಲ್ಲಾ ನಾಯಕರೂ ಉತ್ತಮ ವಾಗ್ಮಿಯೂ ಆದ ಶಾಫಿ ಸಅದಿ ಸೋಮವಾರಪೇಟೆರವರು ನೂತನ ಕಛೇರಿಗೆ ಭೇಟಿನೀಡಿ ಸಂಘಟನೆಯು ಸುಸೂತ್ರವಾಗಿ ಮುಂದೆ ಸಾಗಲು ಇಂತಹ ವಿನೂತನ ಕಛೇರಿಗಳು ಅತ್ಯಗತ್ಯ ಎಂದು ಶ್ಲಾಘಿಸಿದರು. ಕಾಯ೯ಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಂಚಲಾಯಿತು. ಅಧ್ಯಕ್ಷರಾದ ಶಿಹಾಬುದ್ದೀನ್ ಪಾಲಿಬೆಟ್ಟ ಸ್ವಾಗತಿಸಿ ಕಾಯ೯ದಶಿ೯ ಕಮರುದ್ದೀನ್ ಮಾಲ್ದಾರೆ ವಂದಿಸಿದರು.