ಬೆಂಗಳೂರು : ಎಸ್.ಎಸ್.ಎಫ್ ಮೆಜೆಸ್ಟಿಕ್ ಮತ್ತು ವಿಸ್ಡಮ್ ಹೋಂ ಶಾಖೆಗಳ ಜಂಟಿ ಆಶ್ರಯದಲ್ಲಿ ಯವ್ವನ ಮರೆಯಾಗುವ ಮುನ್ನ ಎಂಬ ಘೋಷವಾಕ್ಯದೊಂದಿಗೆ ಯೂನಿಟ್ ಸಮ್ಮೇಳನವು 25-10-2018 ಗುರುವಾರದಂದು ರಾತ್ರಿ ಎಸ್.ಎಸ್. ಎಫ್ ಮೆಜೆಸ್ಟಿಕ್ ಶಾಖಾಧ್ಯಕ್ಸರಾದ ಫರ್ಹಾತ್ ರವರ ಅಧ್ಯಕ್ಸತೆಯಲ್ಲಿ ಹಿಮಾಲಯ ಮಸ್ಜಿದ್ ಮೆಜೆಸ್ಟಿಕ್ನಲ್ಲಿ ನಡೆಯಿತು .
ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್ ಮೆಜೆಸ್ಟಿಕ್ ಶಾಖಾ ಪ್ರಧಾನ ಕಾರ್ಯದರ್ಶಿ ಶಂಸು ಗಾಂಜಾಲ್ ಸ್ವಾಗತಿಸಿ ,ಎಸ್.ವೈ.ಎಸ್ ಮೆಜೆಸ್ಟಿಕ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಮದನಿ ಗುಟ್ಟಹಳ್ಳಿ ಉದ್ಘಾಟಿಸಿದರು .
ಆ ಬಳಿಕ ಪ್ರಖ್ಯಾತ ವಾಗ್ಮಿ ಅನಸ್ ಸಿದ್ದಿಕಿ ಕಾಮಿಲ್ ಸಖಾಫಿ ಸಿರಿಯಾ ಉಸ್ತಾದರು ಯವ್ವನ ಮರೆಯಾಗುವ ಮುನ್ನ ಎಂಬ ವಿಷಯದ ಕುರಿತು ಸವಿಸ್ತಾರವಾಗಿ ಯುವಕರ ಮನಮುಟ್ಟುವ ರೀತಿಯಲ್ಲಿ ವಿಷಯ ಮಂಡಿಸಿದರು .
ಕಾರ್ಯಕ್ರಮದಲ್ಲಿ ಸಯ್ಯದ್ ಶಫಿ ತಂಗಳ್ ,ಝುಬೈರ್ ಫಾಲಿಲಿ ಕಾಮಿಲ್ ಸಖಾಫಿ ಮಲ್ಲೇಶ್ವರಂ, ಸ್ವಾಲಿಹ್ ಎಸ್.ವೈ .ಎಸ್.ಸಾಂತ್ವನ ಕನ್ವಿನರ್ ಬೆಂಗಳೂರು , ಹನೀಫ್ ಮದನಿ ಕುಂಡಾಜೆ , ಎಸ್.ವೈ.ಎಸ್ ಬೆಂಗಳೂರು ,ಲತೀಫ್ ಆಡೋರ ,ಅಬ್ದುಲ್ ರಝಕ್ ಜಾಲಿಮೊಹಲ್ಲ ,ಎಸ್.ಎಸ್.ಎಫ್ ಮೆಜೆಸ್ಟಿಕ್ ಡಿವಿಶನ್ ಕಾರ್ಯದರ್ಶಿ ಜಮಾಲ್ ವಿಸ್ಡಮ್ ಉಪಸ್ಥಿತರಿದ್ದರು .
ಕಾರ್ಯಕ್ರಮದ ಕೊನೆಯಲ್ಲಿ ಎಸ್. ಎಸ್. ಎಫ್ ವಿಸ್ಡಮ್ ಹೋಂ ಅಧ್ಯಕ್ಸರಾದ ಅಲ್ತಾಫ್ ಧನ್ಯವಾದವಿತ್ತರು .
ವರದಿ : ಶಂಸು ಗಾಂಜಾಲ್
( ಪ್ರಧಾನ ಕಾರ್ಯದರ್ಶಿ ಎಸ್. ಎಸ್. ಎಫ್ ಮೆಜೆಸ್ಟಿಕ್ ಶಾಖೆ )