janadhvani

Kannada Online News Paper

ಬಂಟ್ವಾಳ ತಾಲೂಕಿನ ಕುಲಾಲ್ ಶಾಖೆ ವತಿಯಿಂದ ಯುನಿಟ್ ಸಮ್ಮೇಳನ

ಕರ್ನಾಟಕ ರಾಜ್ಯ SSF ಆಯೋಜಿಸಿರುವ ಯೌವ್ವನ ಮರೆಯಾಗುವ ಮುನ್ನ ಎಂಬ ಧ್ಯೇಯ ವಾಕ್ಯ ದೊಂದಿಗೆ ಸರ್ವ ಶಾಖೆಗಳಲ್ಲಿ ಯುನಿಟ್ ಸಮ್ಮೇಳನದ ಮೂಲಕ ಯುವ ಸಮುದಾಯಕ್ಕೆ ಒಳಿತನ್ನು ಕರುಣಿಸುವ ಸಲುವಾಗಿ, ಕುಲಾಲ್ ಶಾಖೆಯ ವತಿಯಿಂದ ಯುನಿಟ್ ಸಮ್ಮೇಳನ_

_ದಿನಾಂಕ 30/10/2018, ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ಮಗ್ರಿಬ್ ನಮಾಝಿನ ಬಳಿಕ ಮರ್ಹೂಂ ಆದಂ ಮುಸ್ಲಿಯಾರ್ ವೇದಿಕೆಯಲ್ಲಿ ಸ್ಥಳೀಯ ಖತೀಬ್ ಬಹ/ ಸಿದ್ದೀಕ್ ಮದನಿ ಉರುವಾಲು ಪದವು ಉಸ್ತಾದರ ನೇತೃತ್ವದಲ್ಲಿ SSF ಕುಲಾಲ್ ಶಾಖೆಯ ಅಧ್ಯಕ್ಷ ರಾದ ಅಬ್ದುಲ್ ರಶೀದ್ ಉಂಡಾರ್ ರವರ ಅಧ್ಯಕ್ಷತೆಯಲ್ಲಿ ಜರಗಲಿರುವ ಪ್ರಸ್ತುತ ಕಾರ್ಯಕ್ರಮದಲ್ಲಿ ಅಜಿಲಮೊಗರು ಖತೀಬ್ ಬಹು/ ತ್ವಾಹ ಸ ಅದಿ ಪ್ರಸ್ತಾವಿಕ ಭಾಷಣ ಮಾಡಲಿದ್ದಾರೆ,_

_ತನ್ನ ಅತ್ಯುತ್ತಮವಾದ ವಾಕ್ಚಾತುರ್ಯದ  ಮೂಲಕ  ಯುವ ಸಮುದಾಯವನ್ನು ಒಳಿತಿನೆಡೆಗೆ ಸೆಳೆಯಬಲ್ಲ ಯುವ ಉಮರಾ ನೇತಾರ SSF ಬಂಟ್ವಾಳ ಡಿವಿಷನ್ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ರವರು ಗಾಂಭೀರ್ಯತೆಯ ಉದ್ಘಾಟನಾ ಪ್ರಭಾಷಣ ದೊಂದಿಗೆ ಅರಂಭಿಸಲ್ಪಡುವ ಯುನಿಟ್ ಸಮ್ಮೇಳನದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ, ಯುವ ಸಮುದಾಯದ ಅವೇಶ, ಪ್ರಭಾಷಣ ಲೋಕದ ದಿಗ್ಗಜ ಬಹು/ ಕನ್ಯಾನ ಸಿರಾಜುದ್ದೀನ್ ಸಖಾಫಿ ಉಸ್ತಾದರು ಯೌವ್ವನ ಮರೆಯಾಗುವ ಮುನ್ನ ಎಂಬ ವಿಷಯದ ಕುರಿತು ಪ್ರೌಢೊಜ್ವಲ ಪ್ರಭಾಷಣ ಮಾಡಲಿದ್ದಾರೆ,_

_ಪ್ರಸ್ತುತ ಕಾರ್ಯಕ್ರಮ ದಲ್ಲಿ ಪ್ರಗಲ್ಭ ಉಲಮಾ ನೇತಾರರು, ಉಮಾರಾ ನಾಯಕರುಗಳು, ಸಂಘಟನ ಕಾರ್ಯಕರ್ತರು ಭಾಗವಹಿಸಲಿದ್ದಾರೆ, ಅದ್ದರಿಂದ ಯುವ ಸಮುದಾಯವೇ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ, ಉಸ್ತಾದರು ನೀಡುವ ಉಪದೇಶವನ್ನು ಕೇಳಿ, ಕಾರ್ಯಕ್ರಮವನ್ನು ವಿಜಯಗೊಳಿಸಬೇಕಾಗಿ ಈ ಮೂಲಕ ತಿಳಿಸುತ್ತಿದ್ದೇವೆ._

SSF ಕುಲಾಲ್ ಶಾಖೆ

error: Content is protected !! Not allowed copy content from janadhvani.com