ಯೌವನ ಮರೆಯಾಗುವ ಮುನ್ನ…. ಎಂಬ ಧ್ಯೇಯ ವಾಕ್ಯ ದೊಂದಿಗೆ ಅ.28ಕ್ಕೆ SSF ಪೇರಿಮಾರ್ ಶಾಖೆ ಸಮ್ಮೇಳನವು ಪೇರಿಮಾರ್ ಸುನ್ನೀ ಸೆಂಟರ್ ನಲ್ಲಿ ನಡೆಯಲಿದೆ.ನಝೀರ್.ಪಿ ( ಅಧ್ಯಕ್ಷರು SSFಪೇರಿಮಾರ್ ಯುನಿಟ್)ಇವರ ಅಧ್ಯಕ್ಷತೆಯಲ್ಲಿ ರಫೀಕ್ ಸಅದಿ ಅಲ್ ಅಫ್ಳಲಿ (ಖತೀಬರು ಪೇರಿಮಾರ್)ಕಾರ್ಯಕ್ರಮವನ್ನು ಉದ್ಘಾಟಿಸುವರು. SSF ಪೇರಿಮಾರ್ ಶಾಖೆಯ ಕಾರ್ಯದರ್ಶಿ ಉನೈಸ್ ಪೇರಿಮಾರ್ ಸ್ವಾಗತಿಸಲಿದ್ದಾರೆ.
ಕಾರ್ಯಕ್ರಮದ ಕೇಂದ್ರ ಬಿಂದು ಮುಖ್ಯ ಪ್ರಭಾಷಣಕ್ಕಾಗಿ ದಾರುಲ್ ಇರ್ಶಾದ್ ಮಾಣಿ ಸಂಸ್ಥೆಯ ಪ್ರಾಂಶುಪಾಲರಾದ ಮುಹಮ್ಮದ್ ಶರೀಫ್ ಸಖಾಫಿ ಉಸ್ತಾದ್ ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಾಮಾಜಿಕ ರಾಜಕೀಯ ಮುಖಂಡರು ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ.