ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ (SSF) “ಯೌವ್ವನ ಮರೆಯಾಗುವ ಮುನ್ನ” ಎಂಬ ಘೋಷ ವಾಕ್ಯದೊಂದಿಗೆ ರಾಜ್ಯಾದ್ಯಂತ ಎಲ್ಲಾ ಶಾಖೆಗಳಲ್ಲಿ “ಯುನಿಟ್ ಸಮ್ಮೇಳನ“ ನಡೆಯುತ್ತಿರುವಾಗ SSF ಬೋವು ಶಾಖೆಯಲ್ಲಿ ಯುನಿಟ್ ಸಮ್ಮೇಳನ ಇದೇ ಬರುವ ತಾರೀಕು ಅಕ್ಟೋಬರ್ 28’ರಂದು ಅಬುಬಕ್ಕರ್ ಸಿದ್ದೀಕ್ ಜುಮಾ ಮಸೀದಿ ಬೋವು ವಠಾರದಲ್ಲಿ ನಡೆಯಲಿದೆ.
ರಾತ್ರಿ 8 ಗಂಟೆಗೆ ನಡೆಯುವ ಯುನಿಟ್ ಕಾನ್ಫರೆನ್ಸ್ ಕಾರ್ಯಕ್ರಮವು ಎಸ್ಸೆಸ್ಸೆಫ್ ಬೋವು ಶಾಖಾಧ್ಯಕ್ಷರಾದ ಯೂಸುಪ್ ’ರವರ ಅಧ್ಯಕ್ಷತೆಯಲ್ಲಿ, ASJM ಬೋವು ಜುಮಾ ಮಸೀದಿ ಖತೀಬರಾದ U.P ಇಬ್ರಾಹಿಂ ಮದನಿ ಉಸ್ತಾದರ ದುಆ ದೊಂದಿಗೆ, ನಂತರ SYS ಬೋವು ಶಾಖೆಯ ಅದ್ಯಕ್ಷರಾದ ಶರೀಫ್ ಲತ್ವೀಫಿ ಉಸ್ತಾದರು ಉದ್ಘಾಟಿಸಲಿದ್ದಾರೆ.
ತದನಂತರ ದ.ಕ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಅಲೀ ತುರ್ಕಳಿಕೆ ಯೌವ್ವನ ಮರೆಯಾಗುವ ಮುನ್ನ ಇದರ ಕುರಿತು ಅರ್ಥ ಗರ್ಭಿತ ಸಂಘಟನ ತರಗತಿ ನಡೆಸಲಿದ್ದಾರೆ,
ನಂತರ ಅಬ್ಬಾಸ್ ಮದನಿ ಬಂಡಾಡ್ ಅಧ್ಯಾತ್ಮಿಕ ಮತ್ತು ಆಶಯ ಎಂಬ ವಿಷಯದ ಕುರಿತು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಅಬುಬಕ್ಕರ್ ಸಿದ್ದೀಕ್ ಕೆರೆಕೋಡಿ