ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ (SSF) “ಯೌವ್ವನ ಮರೆಯಾಗುವ ಮುನ್ನ” ಎಂಬ ಘೋಷ ವಾಕ್ಯದೊಂದಿಗೆ ರಾಜ್ಯಾದ್ಯಂತ ಎಲ್ಲಾ ಶಾಖೆಗಳಲ್ಲಿ “ಯುನಿಟ್ ಸಮ್ಮೇಳನ“ ನಡೆಯುತ್ತಿರುವಾಗ SSF ಮೇಗಿನಪೇಟೆ ಶಾಖೆಯಲ್ಲಿ ಯುನಿಟ್ ಸಮ್ಮೇಳನ ಇದೇ ಬರುವ ತಾರೀಕು ಅಕ್ಟೋಬರ್ 25’ರಂದು ಮೇಗಿನಪೇಟೆ ನ್ಯೂಬಿ ಫೀಸ್ಕೂಲ್ ಎದುರುಗಡೆ ನಡೆಯಲಿದೆ.
ರಾತ್ರಿ 7 ಗಂಟೆಗೆ ನಡೆಯುವ ಯುನಿಟ್ ಕಾನ್ಫರೆನ್ಸ್ ಕಾರ್ಯಕ್ರಮವು ಎಸ್ಸೆಸ್ಸೆಫ್ ಮೇಗಿನಪೇಟೆ ಶಾಖಾಧ್ಯಕ್ಷರಾದ ಯಾಸೀನ್ ಸಹದಿ ’ರವರ ಅಧ್ಯಕ್ಷತೆಯಲ್ಲಿ, SSF ವಿಟ್ಲ ಸೆಕ್ಟರ್ ಅಧ್ಯಕ್ಷರಾದ ಅಬೂಬಕರ್ ಹಿಮಮಿ ಸಖಾಫಿ ದುಅ:ದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಂತರ ವಿಟ್ಲ SSF ಡಿವಿಶನ್ ಸದಸ್ಯರಾದ ರಹೀಂ ಸಖಾಫಿ ಸ್ವಾಗತ ನಡೆಸುವರು ಹಾಗೂ ಅಬೂಬಕರ್ ಫೈಝಿ(ಸುನ್ನೀ ಫೈಝಿ)ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
SSF ದ.ಕ ಜಿಲ್ಲಾ ಕಾರ್ಯದರ್ಶಿ ಸಲೀಂ ಬೈರಿಕಟ್ಟೆ ಪ್ರಾಸ್ತಾವಿಕ ಭಾಷಣ ನಡೆಸಲಿದ್ದು ಹಾಗೂ SSF ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಜಬ್ಬಾರ್ ಸಖಾಫಿ ಪಾತೂರ್
ಯೌವ್ವನ ಮರೆಯಾಗುವ ಮುನ್ನ ಇದರ ಕುರಿತು ಅರ್ಥ ಗರ್ಭಿತ ಪ್ರಭಾಷಣ ನಡೆಸಲಿದ್ದಾರೆ.
ಶಾಖಾ ಪ್ರದಾನ ಕಾರ್ಯದರ್ಶಿ ಉಬೈದ್ ವಿಯಂ ಕಾರ್ಯಕ್ರಮ ನಿರೂಪಣೆ ಹಾಗೂ ಧನ್ಯವಾದ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.