janadhvani

Kannada Online News Paper

ಎಣ್ಮೂರು (ಜನಧ್ವನಿ ವಾರ್ತೆ): ಎಸ್.ಎಸ್.ಎಫ್ ಎಣ್ಮೂರು ಶಾಖೆಯ ವತಿಯಿಂದ “ಯವ್ವನ ಮರೆಯಾಗುವ ಮುನ್ನ” ಎಂಬ ಶೀರ್ಷಿಕೆಯಡಿ ಯುನಿಟ್ ಕಾನ್ಫರೆನ್ಸ್ ಹಾಗೂ ವಾರ್ಷಿಕ ಜಲಾಲಿಯ್ಯ ರಾತೀಬ್ ದಿನಾಂಕ ಅಕ್ಟೋಬರ್ 21 ಸಂಜೆ 7.00 ಕ್ಕೆ ಸರಿಯಾಗಿ ತಾಜುಲ್ ಉಲಮಾ ವೇದಿಕೆ ಶಿವಗೌರಿ ಕಲಾ ಮಂದಿರ ಪಡ್ಪಿನಂಗಡಿಯಲ್ಲಿ ನಡೆಯಿತು.

ಶಾಖಾದ್ಯಕ್ಷರಾದ ಸಿದ್ದೀಕ್ ಸಅದಿ ಎಣ್ಮೂರುರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು SYS ನಾಯಕರಾದ ಕೆ.ಎಚ್ ಇಬ್ರಾಹಿಮ್ ಮುಸ್ಲಿಯಾರ್ ಉದ್ಘಾಟಿಸಿದರು. ಅದ್ಯಕ್ಷೀಯ ಭಾಷಣದ ಬಳಿಕ ಬೆಳ್ಳಾರೆ ಸೆಕ್ಟರ್ ಅದ್ಯಕ್ಷರಾದ ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿಯವರು ಯುನಿಟ್ ಕಾನ್ಫರೆನ್ಸ್ ಕುರಿತು ಸಂದೇಶ ಭಾಷಣವನ್ನು ನಡೆಸಿದರು. ಮುಹಮ್ಮದ್ ಹನೀಫ್ ಸಖಾಫಿ ಎಮ್ಮೆಮ್ಮಡು ಮುಖ್ಯ ಪ್ರಭಾಷಣ ನಡೆಸಿ ಯುವ ಜನಾಂಗವು ದುಶ್ಟಟಗಳಿಂದ ಮುಕ್ತಿ ಹೊಂದಿ ಇಸ್ಲಾಮಿನ ನೈಜ ಸಂಸ್ಕೃತಿಯಲ್ಲಿ ಜೀವಿಸಬೇಕೆಂದು ಕರೆ ನೀಡಿದರು. SYS ನಾಯಕರಾದ ಹೈದರಾಲಿ ಐವತ್ತೊಕ್ಲು, ಶಿವಗೌರಿ ಕಲಾಮಂದಿರದ ಮಾಲಕರಾದ ಸುರೇಶ್ ಕುಮಾರ್ ನಡ್ಕ, ಕಲ್ಮಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಕುಮಾರ್ ಆಕ್ರಿಕಟ್ಟೆ, ಮಾತನಾಡಿ ಶಾಖೆಯ ಕಾರ್ಯ ವೈಖರಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ತಾಲೂಕು ಪಂಚಾಯತ್ ಸದಸ್ಯರಾದ ಅಬ್ದುಲ್ ಗಫೂರ್ ಕಲ್ಮಡ್ಕ, SYS ನಾಯಕರಾದ ಅಬ್ದುಲ್ ಖಾದರ್ ಕೊಳ್ತಂಗರೆ, ಶಾಖಾ ಉಸ್ತುವಾರಿ ಖಲೀಲ್ ಝುಹ್ರಿ ನೆಕ್ಕಿಲ, ಬೆಳ್ಳಾರೆ ಸೆಕ್ಟರ್ ಪ್ರ. ಕಾರ್ಯದರ್ಶಿ ಕಲಾಂ ಝುಹ್ರಿ ಬೆಳ್ಳಾರೆ, KCF ಸದಸ್ಯರಾದ ಮುಸ್ತಫಾ ಸಅದಿ ಎಣ್ಮೂರು, ಸುಳ್ಯ ಡಿವಿಶನ್ ಕೋಶಾಧಿಕಾರಿ ಹಸೈನಾರ್ ನೆಲ್ಲಿಕಟ್ಟೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಗ್ರಿಬ್ ನಮಾಜಿನ ಬಳಿಕ ನಡೆದ ಜಲಾಲಿಯ್ಯ ರಾತೀಬ್ ಗೆ ಮಶೂದ್ ಅಹ್ಸನಿ ಎಣ್ಮೂರು ನೇತೃತ್ವ ನೀಡಿದರು. ನಮ್ಮನ್ನಗಳಿದ ಸುನ್ನೀ ನಾಯಕರು, ಕಾರ್ಯಕರ್ತರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ನಡೆಸಲಾಯಿತು. ಕಾರ್ಯಕ್ರಮವನ್ನು ಶಾಖಾ ಕಾರ್ಯದರ್ಶಿ ನೂರುದ್ದೀನ್ ಅಂಜದಿ ಸ್ವಾಗತಿಸಿ, ವಂದಿಸಿದರು. ಕೊನೆಯಲ್ಲಿ ತಬರ್ರುಕ್ ವಿತರಣೆ ನಡೆಸಲಾಯಿತು.

error: Content is protected !! Not allowed copy content from janadhvani.com