janadhvani

Kannada Online News Paper

SSF ಪಾಳ್ಯತ್ತಡ್ಕ ಯುನಿಟ್ ಸಮ್ಮೇಳನ, ಹಾಗೂ ಮಹ್ಲರತ್ತುಲ್ ಬದ್ರಿಯಾ.

ಈಶ್ವರಮಂಗಲ (ಜನಧ್ವನಿ ವಾರ್ತೆ): ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿರುವ ಯೌವ್ವನ ಮರೆಯಾಗುವ ಮುನ್ನ ಎಂಬ ಧ್ಯೇಯ ವಾಕ್ಯ ದೊಂದಿಗೆ ಸರ್ವ ಶಾಖೆಗಳಲ್ಲಿ ನಡೆಸಿಕೊಂಡು ಬರುತ್ತಿರುವ ಯುನಿಟ್ ಸಮ್ಮೇಳನ ಈಶ್ವರಮಂಗಲದ ಪಾಳ್ಯತ್ತಡ್ಕ ಶಾಖೆಯ ವತಿಯಿಂದ ತ್ವೈಬ ಸೆಂಟರ್ ನಲ್ಲಿ ಅಕ್ಟೋಬರ್ 21 ಆದಿತ್ಯವಾರ ದಂದು ನಡೆಸಲಾಯಿತು.

ಹಿರಿಯ ವಿದ್ವಾಂಸರಾದ ಹಂಝ ಮುಸ್ಲಿಯಾರ್ ಈಶ್ವರಮಂಗಲ ಇವರ ನೇತ್ರತ್ವದಲ್ಲಿ ಮಹ್ಲರತ್ತುಲ್ ಬದ್ರಿಯಾ ಮಜ್ಲಿಸ್ ಗೆ ನಡೆಯಿತು.

SSF ಪಾಳ್ಯತ್ತಡ್ಕ ಶಾಖೆಯ ಕಾರ್ಯದರ್ಶಿ ಸಲ್ಮಾನ್ ಬಿ.ಸಿ ಯವರು ಸ್ವಾಗತ ಕೋರಿದ ಸಮ್ಮೇಳನದ ಅಧ್ಯಕ್ಷತೆಯನ್ನು ಶಾಖೆಯ ಅಧ್ಯಕ್ಷರಾದ ಹುಸೈನ್ ಜೌಹರಿ ಉಸ್ತಾದರು ಅಲಂಕರಿಸಿದರು. ತ್ವೈಬ ಮುದರ್ರಿಸರಾದ ದಾವೂದುಲ್ ಹಕೀಂ ಹಿಮಮಿ ಸಖಾಫಿ ಉದ್ಘಾಟನಾ ಭಾಷಣ ಮಾಡಿದರು.

ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿದ ಅಬೂಬಕರ್ ಫೈಝಿ ಕುಂಬ್ಡಾಜೆ ಉಸ್ತಾದರು ಸಂಘಟನೆಯ ಮಹತ್ವವನ್ನು ಸವಿಸ್ತಾರವಾಗಿ ವಿವರಿಸಿದರು. ಪಾಲಡ್ಕ ಖತೀಬರಾದ ಹಾಶಿರ್ ಸಖಾಫಿ, ಮುಹಮ್ಮದ್ ಮದನಿ ಪಾಳ್ಯತ್ತಡ್ಕ ಇವರು ಕಾರ್ಯಕ್ರಮಕ್ಕೆ ಆಸಂಶ ಪ್ರಭಾಷಣ ನಡೆಸಿದರು.

SYS ಈಶ್ವರಮಂಗಲ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಮಿಸ್ಬಾಹಿ, SSF ಈಶ್ವರಮಂಗಲ ಸೆಕ್ಟರ್ ಅಧ್ಯಕ್ಷ ರವೂಫ್ ಮಾಡನ್ನೂರು, SSF ಈಶ್ವರಮಂಗಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶಾಫಿ ಮೇನಾಲ, SSF ಈಶ್ವರಮಂಗಲ ಸೆಕ್ಟರ್ ಉಪಾಧ್ಯಕ್ಷರಾದ ಸಂಶುದ್ದೀನ್ ಹನೀಫಿ, SYS ಪಾಳ್ಯತ್ತಡ್ಕ ಬ್ರಾಂಚ್ ಅಧ್ಯಕ್ಷರಾದ ಲತೀಫ್ ಮುಸ್ಲಿಯಾರ್ ಮೀನಾವು, SYS ಪಾಳ್ಯತ್ತಡ್ಕ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಖಾಸಿಮಿ ಹಾಗೂ ಊರಿನ ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು. ಉಮರ್ ಸಅದಿ ಪಾಳ್ಯತ್ತಡ್ಕ ವಂದಿಸಿದರು.

error: Content is protected !! Not allowed copy content from janadhvani.com