ಮಡಿಕೇರಿ: ಕೊಟ್ಟಮುಡಿ ಸುನ್ನೀ ಸ್ಟೂಡೆಂಟ್ಸ್ ಫೆಡೆರೇಶನ್ ಶಾಖೆ ವತಿಯಿಂದ “ಯೌವ್ವನ ಮರೆಯಾಗುವ ಮುನ್ನ” ಎಂಬ ಪ್ರಮೇಯದಡಿಯಲ್ಲಿ ಅ.17 ಬುಧವಾರ ದಂದು ಮರ್ಕಝ್ ಕ್ಯಾಂಪಸ್ ನಲ್ಲಿ ಯುನಿಟ್ ಸಮ್ಮೇಳನ ನಡೆಯಲಿದೆ.
ಅ.17 ಸಂಜೆ 4:00 ಗಂಟೆಗೆ ಹಳೇ ಜುಮಾ ಮಸೀದಿ ಖತೀಬರಾದ ಮುಹಮ್ಮದಲಿ ಸಅದಿ ಉಸ್ತಾದರ ನೇತೃತ್ವದಲ್ಲಿ ಅರಬಿ ತಂಗಳ್ ಮಖಾಂ ಝಿಯಾರತ್ ಬಳಿಕ ಶಾಖ ಸಮ್ಮೇಳನದ ಪ್ರಯುಕ್ತ ದ್ವಜಾರೋಹಣ ದೊಂದಿಗೆ ಸಮ್ಮೇಳನಕ್ಕೆ ಅಧಿಕ್ರತ ಚಾಲನೆದೊರೆಯಲಿದ್ದು ಮಗ್ರಿಬ್ ನಮಾಝ್ ಬಳಿಕ ಅಲ್ ಮಹ್-ಳರತ್ತುಲ್ ಬದ್ರಿಯಾ ರಾತೀಬ್ ನಡೆಯಲಿದ್ದು ಮರ್ಕಝ್ ಮುದರ್ರಿಸ್ ಅಂಶಾದ್ ಅಹ್ಸನಿ ಅಲ್ ಖಾಮಿಲ್ ಸಖಾಫಿ ನೇತೃತ್ವ ನೀಡಲಿದ್ದಾರೆ.ರಾತ್ರಿ 8:00 ಗಂಟೆಗೆ ಸಮಾರೋಪ ಸಮ್ಮೇಳನ ನಡೆಯಲಿದೆ,ಎಸ್ ಎಸ್ ಎಫ್ ಕೊಟ್ಟಮುಡಿ ಶಾಖೆ ಅಧ್ಯಕ್ಷ ಅಸ್ಲರ್ ಸಖಾಫಿ ಅಧ್ಯಕ್ಷತೆಯನ್ನು ವಹಿಸಲಿದ್ದು SYS ನಾಪೋಕ್ಲು ಸೆಂಟರ್ ಅಧ್ಯಕ್ಷರಾದ ಅಬ್ದುಲ್ಲಾ ಸಖಾಫಿ ಸಮಾರೋಪ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಎಸ್ ಎಸ್ ಎಫ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು ಖ್ಯಾತ ಯುವ ವಾಗ್ಮಿ ಬಹು: ನೌಫಲ್ ಸಖಾಫಿ,ಕಳಸ ಮುಖ್ಯಪ್ರಭಾಷ ಮಾಡಲಿದ್ದಾರೆ,ಅಲ್ಲದೆ ಅನೇಕ ಉಲಮಾ ಉಮರಾಗಲು ಭಾಗವಹಿಸಲಿದ್ದಾರೆ.