ಬೆಂಗಳೂರು (ಜನಧ್ವನಿ ವಾರ್ತೆ): ಎಸ್ಸೆಸ್ಸಫ್ ಮಾರತಹಳ್ಳಿ ಯೂನಿಟ್ ಕಾನ್ಫರೆನ್ಸ್ ಅಕ್ಟೋಬರ್ ೨೫, ೨೦೧೮ರ ಗುರುವಾರ ಅಸ್ತ ರಾತ್ರಿ ೧೦.೩೦ಕ್ಕೆ ಮಾರತಹಳ್ಳಿ ವಿಲೇಜ್ ರೆಸ್ಟೋರಂಟ್ ನಲ್ಲಿ ನಡೆಯಲಿದೆ. ಎಸ್ಸೆಸ್ಸಫ್ ರಾಜ್ಯ ಸಮಿತಿಯು ’ಯೌವ್ವನ ಮರೆಯಾಗುವ ಮುನ್ನ…’ ಎಂಬ ಘೋಷವಾಕ್ಯದಲ್ಲಿ ರಾಜ್ಯದಾದ್ಯಂತ ನಡೆಯುತ್ತಿರುವ ಯೂನಿಟ್ ಕಾನ್ಫರೆನ್ಸ್ ಭಾಗವಾಗಿ ಬೆಂಗಳೂರಿನ ಮಾರತಹಳ್ಳಿ ಶಾಖೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.
ಎಸ್ಸೆಸ್ಸಫ್ ಬೆಂಗಳೂರು ಜಿಲ್ಲಾಧ್ಯಕ್ಷ ತಾಜುದ್ದೀನ್ ಪಾಳಿಲಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಅಬ್ಬಾಸ್ ನಿಝಾಮಿ ಭಾಗವಹಿಸಲಿದ್ದಾರೆ. ಮಾರತಹಳ್ಳಿ ಡಿವಿಶನ್ ಅಧ್ಯಕ್ಷರಾದ ಅಬೂಬಕ್ಕರ್ ಅಹ್ಸನಿ ಉದ್ಘಾಟನೆಗೈಯಲಿದ್ದಾರೆ. ಮಹ್ ಳರತುಲ್ ಬದ್ರಿಯ್ಯಾ ಮಜ್ಲಿಸ್ ಕಾರ್ಯ್ಕಕ್ರಮದ ನಂತರ ನಡೆಯಲಿದ್ದು, ಬಳಿಕ ಅನ್ನದಾನ ನಡೆಯಲಿದೆ. ಮಾರತಹಳ್ಳಿ ಆಸುಪಾಸಿನಲ್ಲಿರುವ ಸುನ್ನೀ ವಿದ್ಯಾರ್ಥಿ ಮಿತ್ರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅಬ್ದುಲ್ಲತೀಫ್ ವೆಜ್ ಕ್ಯಾಂಪಸ್ ಜನಧ್ವನಿಗೆ ತಿಳಿಸಿದ್ದಾರೆ.