janadhvani

Kannada Online News Paper

ಉಜಿರೆ SBS ಮಕ್ಕಳ “ಕಲರ್ ಕ್ಯಾಂಪ್

ಉಜಿರೆ: SSF ಉಜಿರೆ ಯುನಿಟ್‌ ಅಧೀನದಲ್ಲಿ ಮುಹಿಯುದ್ದೀನ್ ಜುಮಾ ಮಸೀದಿ ಇದರ ಅಂಗಸಂಸ್ಥೆ ಮದರಸ SBS ವಿಧ್ಯಾರ್ಥಿಗಳಿಗೆ “ಕಲರ್ ಕ್ಯಾಂಪ್” ದಿನಾಂಕ 30-09-2018 ನೇ ಅದಿತ್ಯವಾರದಂದು ಬದ್ರುಲ್ ಹುದಾ ಹೈಯರ್ ಸೆಕೆಂಡರಿ ಮದರಸ ಹಳೆಪೇಟೆ ಉಜಿರೆಯಲ್ಲಿ ನಡೆಯಿತು.

SJM ಉಜಿರೆ ರೇಂಜ್ ಕೋಶಾಧಿಕಾರಿಯಾದ ಖಾಲಿದ್ ಮುಸ್ಲಿಯಾರ್ ನೇತೃತ್ವ ವಹಿಸಿ,ದುವಾ ಮೂಲಕ ಚಾಲನೆ ನೀಡಿದರು.
ಝಕರಿಯ್ಯ ಹನೀಫಿ,ಕನ್ಯಾಡಿ ಯವರು SBS ಮಕ್ಕಳಿಗೆ ತರಗತಿ ನಡೆಸಿದರು.
ವೇದಿಕೆಯಲ್ಲಿ BHM ಉಜಿರೆಯ ಅಧ್ಯಪಕರಾದ ಉಸ್ಮಾನ್ ಮುಸ್ಲಿಯಾರ್, ಮುಹಿಯುದ್ದೀನ್ ಮದರಸ ಅತ್ತಾಜೆಯ ಅಧ್ಯಪಕರಾದ ಝಕರಿಯ್ಯ ಮದನಿ ಉಪಸ್ಥಿತಿಯಿದ್ದರು.
SBS ವಿಧ್ಯಾರ್ಥಿಗಳು,SSF ಉಜಿರೆ ಯುನಿಟ್ ನ ಸದಸ್ಯರುಗಳು ಹಾಜರಿದ್ದರು.
SSF ಉಜಿರೆ ಯುನಿಟ್ ನ ಪ್ರ.ಕಾರ್ಯದರ್ಶಿಯಾದ ಎಂ.ಮುಬೀನ್ ರವರು ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

ವರದಿ: ಎಂ.ಎಂ.ಉಜಿರೆ.

error: Content is protected !! Not allowed copy content from janadhvani.com