janadhvani

Kannada Online News Paper

ಜಿದ್ದಾ: ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ತಲಕ್ಕಿ ಪ್ರತಿನಿಧಿಗಳ ಸಮಾವೇಶ

ಜಿದ್ಧಾ: ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ತಲಕ್ಕಿ, ಜಿದ್ದಾ ಕಮಿಟಿ ವತಿಯಿಂದ 28.09.2018 ಶರಫೀಯಾದಲ್ಲಿ
ನಡೆದ ಪ್ರತಿನಿಧಿಗಳ ಸಮಾವೇಶ ಮತ್ತು ತಲಕ್ಕಿ ತಂಙಳ್ ರವರ ಅಭಿನಂದನಾ ಕಾರ್ಯಕ್ರಮವು ಸಯ್ಯಿದ್
ಝಕರಿಯಾ ಸಖಾಫಿ ತಂಙಳ್ ರವರ ಪ್ರಾರ್ಥನೆಯೊಂದಿಗೆ ಜರಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಫಿಲ್ GM ಸುಲೈಮಾನ್ ಹನೀಫಿಯವರು ವಹಿಸಿ ತಲಕ್ಕಿ ಸ್ಥಾಪನೆಯ ದ್ಯೆಯ ಹಾಗೂ ಅದರ ಚಟುವಟಿಕೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ಉದ್ಘಾಟನೆಯನ್ನು ನೆರವೇರಿಸಿದ ಉಚ್ಚಿಲ ಮುಹಮ್ಮದ್ ಬುಖಾರಿ ತಂಙಳ್ ರವರು ಪ್ರವಾಸಿ ಜೀವನದ ಪ್ರಸ್ತುತ ಸ್ಥಿತಿ ಗತಿಯ ಬಗ್ಗೆ ಅರಿವು ಮೂಡಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಅಭಿನಂದಿಸಿ,  ಸ್ಥಾಪನೆಗಾಗಿ ಶ್ರಮಿಸಿದವವರನ್ನು ಶ್ಲಾಘಿಸಿದರು.

ಸಂಸ್ಥೆಯ ಆರ್ಗನೈಝರ್ ಅಬ್ದುಲ್ ಅಝೀಝ್ ಝುಹ್ರಿ ಬಾಳೆಪುಣಿಯವರು
ತಾಜುಲ್ ಉಲಮಾ ಕಾಂಪ್ಲೆಕ್ಸ್
ಸಂಸ್ಥೆಯ ಸಾರಥಿ ಸಯ್ಯಿದ್ ಅಹಮ್ಮದ್ ಶಿಹಾಬುದ್ದೀನ್ ಅಲ್ ಮಶ್ಹೂರ್ ತಲಕ್ಕಿ ತಂಙಳ್ ರವರ ಕೆಲವು ಪವಾಡಗಳ ಬಗ್ಗೆ ವಿವರಣೆ ನೀಡಿ, ತುಂಬು ಹೃದಯದಿಂದ ಸಭಿಕರನ್ನು ಸ್ವಾಗತಿಸಿದರು.ನಂತರ ತಲಕ್ಕಿ ತಂಙಳ್ ರವರನ್ನು ಶಾಲು ಹೊದಿಸಿ
ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಸಯ್ಯಿದ್ ತಲಕ್ಕಿ ತಂಙಳ್ ರವರು ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡುತಾ ಪ್ರತಿಯೊಬ್ಬರೂ ತಮ್ಮ ಕೆಲಸ ಕಾರ್ಯದ ಒತ್ತಡದ ನಡುವೆಯೂ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅದರ ಯಶಸ್ವಿಗಾಗಿ ಶ್ರಮಿಸಿ ಸಹಕರಿಸಿದ್ದಕ್ಕೆ ತುಂಬು ಹೃದಯದ ಪ್ರಶಂಸೆಗಳನ್ನು ನೀಡಿ, ಕೆಲವು ಉಪಯುಕ್ತ ಉಪದೇಶ ಹಾಗು ಸಲಹೆಗಳನ್ನು ನೀಡಿದರು. ಕಾರ್ಯಕ್ರಮದ ಆಯೋಜನೆಯ ನೇತೃತ್ವ ವಹಿಸಿದ ಇಂಜಿನಿಯರ್ ಮುಹಮ್ಮದ್ ಕಲ್ಲರ್ಬೆ,ಇಬ್ರಾಹಿಂ ಬನ್ನೂರ್ ಹಾಗೂ ಸಂಗಡಿಗರ ಪ್ರಯತ್ನವನ್ನು ದುಆ ಮೂಲಕ ಶ್ಲಾಘಿಸಿದರು.

ಈ ವೇಳೆ ತಲಕ್ಕಿ ಸಂಸ್ಥೆಯ ಸಾಧನೆಗಳ ಕಿರು ತುಣುಕು ವಿಡಿಯೋ ಪ್ರದರ್ಶಿಸಲಾಯಿತು. 2018 ರ ಸಾಲಿನ HVC ಸ್ವಯಂ ಸೇವಕರಾಗಿ ದುಡಿದ ಕೆಸಿಎಫ್ ಶರಫಯ್ಯಾ ಮತ್ತು ಬವಾದಿ ಸೆಕ್ಟರ್ ಕಾರ್ಯಕರ್ತರನ್ನು ನ್ಯಾಷನಲ್ ಸಮಿತಿಯ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ತಲಕ್ಕಿ ತಂಙಲ್ ರವರ ಪುಣ್ಯ ಹಸ್ತದಿಂದ ನೀಡಿ ಗೌರವಿಸಲಾಯಿತು

ಕಾರ್ಯಕ್ರಮದ ಕೊನೆಯಲ್ಲಿ ಇಂಜಿನಿಯರ್ ಮುಹಮ್ಮದ್ ಕಲ್ಲರ್ಬೆ ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಾಪನೆಯ ಅಭಿವೃಧಿ ಧ್ಯೇಯ ಮುಖ ಕೊಡುಗೈ ದಾನಿಗಳನ್ನು ಅಭಿನಂದಿಸಿದರು.

error: Content is protected !! Not allowed copy content from janadhvani.com