janadhvani

Kannada Online News Paper

ತ್ವಾಯಿಫ್: ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ತ್ವಾಯಿಫ್ ಸೆಕ್ಟರ್ ನ 11 HVC ಸ್ವಯಂ ಸೇವಕರಾಗಿ ದುಡಿದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಕೆಸಿಎಫ್ ಹವಿಯ್ಯ ಯುನಿಟ್ ಮಾಸಿಕ ಸ್ವಲಾತ್ ಮಜ್ಲಿಸ್ 28/09/2018 ರಾತ್ರಿ ಕೆಸಿಎಫ್ ಹವಿಯ್ಯ ಯುನಿಟ್ ಕೋಶಾಧಿಕಾರಿ ಸಲೀಂ ಅಂಡಕೇರಿ ನಿವಾಸದಲ್ಲಿ ನಡೆಯಿತು.

ಕೆಸಿಎಫ್ ಹವಿಯ್ಯ ಯುನಿಟ್ ಅಧ್ಯಕ್ಷರಾದ ಇಲ್ಯಾಸ್ ಮದನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ತ್ವಾಯಿಫ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹನೀಫ್ ಹಿಮಮಿ ಸಮಾರಂಭವನ್ನು ಉದ್ಘಾಟಿಸಿದರು.

2018 ಸಾಲಿನಲ್ಲಿ ಹಜ್ಜಾಜಿಗಳ ಸೇವೆಗೈದ HVC ಕಾರ್ಯಕರ್ತರಿಗೆ ತ್ವಾಯಿಫ್ ಸೆಕ್ಟರ್ ಅಧ್ಯಕ್ಷರಾದ ಹಂಝ ಮಡಿಕೇರಿ ಹಾಗೂ ಹವಿಯ್ಯ ಯುನಿಟ್ ಸಾಂತ್ವನ ವಿಭಾಗ ಅಧ್ಯಕ್ಷರಾದ ಶೌಕತ್ ಕಿನ್ಯ, ನ್ಯಾಷನಲ್ ಸಮಿತಿ ವತಿಯಿಂದ ನೀಡಿದ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ವರದಿ: ಮುರ ನವಾಝ್

error: Content is protected !! Not allowed copy content from janadhvani.com