ವಳವೂರು: ಎಸ್ಸೆಸ್ಸೆಫ್ ಅರಬನ ವಳವೂರು ಶಾಖೆಯ ನೂತನ ಸುನ್ನೀ ಸೆಂಟರ್ ಉದ್ಟಾಟನೆ ಮತ್ತು ಮಾಸಿಕ ಮಹ್ಳರತುಲ್ ಬದ್ರಿಯಾ ಆಧ್ಯಾತ್ಮಿಕ ಸಂಗಮವು ಸೆ.28ರಂದು ಮಗ್ರಿಬ್ ನಮಾಝ್ ನ ನಂತರ ನಡೆಯಿತು.ಎಸ್ಸೆಸ್ಸೆಫ್ ಅರಬನ ವಳವೂರು ಶಾಖೆ ಇದರ ನೂತನ ಸುನ್ನೀ ಸೆಂಟರ್ ಉದ್ಘಾಟನೆಯನ್ನು ದಾರುಲ್ ಇರ್ಶಾದ್ ಮಾಣಿ ಇದರ ನೇತಾರರಾಗಿರುವ ಝೈನುಲ್ ಉಲಮಾ ಮಾಣಿ ಉಸ್ತಾದ್ ನಿರ್ವಹಿಸಿದರು.
ಮಾಸಿಕ ಮಹ್ಳರತುಲ್ ಬದ್ರಿಯಾ ಆಧ್ಯಾತ್ಮಿಕ ಸಂಗಮವು ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರಾದ ಬಹು ವಳವೂರು ಉಸ್ತಾದ್ ರವರ ನೇತೃತ್ವದಲ್ಲಿ ನಡೆಯಿತು.ಪ್ರಸ್ತುತ ಆತ್ಮೀಯ ಸಂಗಮಕ್ಕೆ ವಳವೂರು ಜಮಾಅತ್ ಖತೀಬರಾದ ಅಬೂಬಕ್ಕರ್ ಸಅದಿ ಉಸ್ತಾದ್ ಊರಿನ ಹಿರಿಯ ಉಲಮಾ ನೇತಾರ ಅಕ್ಕರಂಗಡಿ ಉಸ್ತಾದ್ ಹಾಗೂ ಹಲವಾರು ಊರಿನ ಪ್ರಮುಖ ಉಮರಾ ನೇತಾರರು ಭಾಗವಹಿಸಿದ್ದರು.
ಊರಿನ ಎಲ್ಲಾ ಸುನ್ನೀ ಉಲಮಾ ಉಮರಾ ನೇತಾರರು ಸುನ್ನೀ ಯುವ ಕಾರ್ಯಕರ್ತರು ಪ್ರಸ್ತುತ ಸಂಗಮಕ್ಕೆ ಹಾಜರಿದ್ದರು.
Amiin