ಮಕ್ಕತುಲ್ ಮುಕರ್ರಮಃ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ವತಿಯಿಂದ 2018 ರ ಸಾಲಿನಲ್ಲಿ 50 ದಿನಗಳ ಕಾಲ ಹಜ್ಜಾಜಿಗಳ ಸೇವೆ ಮಾಡಿದ 51 ಕಾರ್ಯಕರ್ತರಿಗೆ ಬೃಹತ್ ಅಭಿನಂದನಾ ಕಾರ್ಯಕ್ರಮವನ್ನು ಏಷ್ಯನ್ ಹಾಲ್ ಕುದೈ ಯಲ್ಲಿ ಸಯ್ಯಿದ್ ಅಹ್ಮದ್ ಶಿಹಾಬುದ್ದೀನ್ ಅಲ್ ಮಶ್ ಹೂರ್ ತಂಙಲ್ ತಲಕ್ಕಿ ಯವರ ಪ್ರಾರ್ಥನೆಯೊಂದಿಗೆ ನಡೆಸಲಾಯಿತು.ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಾಣಿ ದಾರುಲ್ ಇರ್ಷಾದ್ ಆರ್ಗನೈಝರ್ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು ಕಾರ್ಯಕ್ರಮವನ್ನು ಉದ್ಘಾಟಿಸಿದರು.51 ಮಂದಿ ಸ್ವಯಂ ಸೇವಕರಿಗೆ ನ್ಯಾಷನಲ್ ಸಮಿತಿ ವತಿಯಿಂದ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ಸಯ್ಯಿದ್ ತಲಕ್ಕಿ ತಂಙಲ್ ರವರ ಪುಣ್ಯ ಹಸ್ತದಿಂದ ನೀಡಿ ಗೌರವಿಸಲಾಯಿತು.
ಕರ್ನಾಟಕದ ಹಾಜಿಗಳಿರುವ ಬಿಲ್ಡಿಂಗ್ ಗಳಿಗೆ ತೆರಲಿ ಹಜ್ಜ್ ತರಗತಿ ನಡೆಸಿ ಕೊಟ್ಟ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು, HVC ಸೆಕ್ಟರ್ ಕ್ಯಾಪ್ಟನಾಗಿ ಹಗಲು ರಾತ್ರಿಯನ್ನೆದೆ ಅತ್ಯಂತ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮೂಸಾ ಹಾಜಿ ಕಿನ್ಯ, ಸದಾ ಕಾಲ ಸ್ವಯಂಸೇವಕರೊಂದಿಗಿದ್ದು, ಕಾರ್ಯ ನಿರ್ವಹಿಸಿ, ಹುರಿದುಂಬಿಸಿ ಪ್ರೋತ್ಸಾಹಿಸಿದ ಜಿದ್ದಾ ಝೋನಲ್ ಪ್ರಧಾನ ಕಾರ್ಯದರ್ಶಿ ಇಬ್ರಾಹೀಮ್ ಕಿನ್ಯಾ, ಸೌದಿ ಅರೇಬಿಯಾದಿಂದ ನಾನಾ ಕಡೆಯಿಂದ ಆಗಮಿಸಿದ HVC ಕಾರ್ಯಕರ್ತರಿಗೆ ಎಲ್ಲಾ ವಿಧ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಬಶೀರ್ ಕೆಜೆಕಾರ್, ಹಾರಿಸ್ ಕಿನ್ಯಾ ರವರನ್ನು ಈ ಸಂದರ್ಭ ಶಾಲು ಹೊದಿಸಿ ವಿಶೇಷವಾಗಿ ಸನ್ಮಾನಿಸಲಾಯಿತು.ಇದೇ ವೇಳೆ ಸಯ್ಯಿದ್ ತಲಕ್ಕಿ ತಂಙಲ್ ರವರನ್ನು ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ವತಿಯಿಂದ ಗೌರವ ಉಡುಪು ಧರಿಸಿ, ಹಾಗೂ ಡಿಕೆಎಸ್ಸಿ ಮಕ್ಕಾ ಯೂನಿಟ್ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.ತಂಙಲ್ ರವರು ಮಾತನಾಡಿ ಅತಿಥಿಗಳನ್ನು ಸತ್ಕರಿಸುವುದು ಅತ್ಯಂತ ಪುಣ್ಯ ಕರ್ಮವಾಗಿದೆ, ಅದಕ್ಕಿಂತಲೂ ಈ ಪುಣ್ಯ ಭೂಮಿಯಲ್ಲಿ ಅಲ್ಲಾಹನ ಅತಿಥಿಗಳಾದ ಹಜ್ಜಾಜಿಗಳನ್ನು HVC ಸ್ವಯಂ ಸೇವಕರಾಗಿ ಸತ್ಕರಿಸಿದ್ದು ನೀವು ಮಾಡುತ್ತಿರುವ ಅತ್ಯಂತ ಉತ್ತಮ್ಮವಾದ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿತ್ತಾ ಕಾರ್ಯಕರ್ತರಿಗೆ ಇನ್ನಷ್ಟು ಧೈರ್ಯ ತುಂಬಿ ಪ್ರಾರ್ಥಿಸಿದರು.ಕೆಸಿಎಫ್ ಜಿದ್ದಾ ಝೋನಲ್ ಪ್ರಧಾನ ಕಾರ್ಯದರ್ಶಿ ಇಬ್ರಾಹೀಮ್ ಕಿನ್ಯಾ ಮತ್ತು ಕೋಶಾಧಿಕಾರಿ ಇಂಜಿನಿಯರ್ ಮುಹಮ್ಮದ್ ಕಲ್ಲರ್ಭೆ ಶುಭ ಹಾರೈಸಿ ಮಾತಾನಾಡಿದರು.ಈ ಸಂದರ್ಭ ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ತಲಕ್ಕಿ ಆರ್ಗನೈಝರ್ ಅಬ್ದುಲ್ ಅಝೀಝ್ ಬಾಳೆಪುಣಿ, ಡಿಕೆಎಸ್ಸಿ ಮಕ್ಕಾ ಯೂನಿಟ್ ಗೌರವಧ್ಯಕ್ಷ ಅಕ್ಬರ್ ಅಲಿ ಮಾಚಾರ್ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು HVC ಸೆಕ್ಟರ್ ಮಿಡಿಯಾ ಕನ್ವಿನರ್ ಕಲಂದರ್ ಶಾಫಿ ಅಸೈಗೋಳಿ ಸ್ವಾಗಿಸಿದರು, HVC ಸೆಕ್ಟರ್ ಕೊರ್ಡಿನೆಟರ್ ಇಕ್ಬಾಲ್ ಕಕ್ಕಿಂಜೆ ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ: ಇಕ್ಬಾಲ್ ಕಕ್ಕಿಂಜೆ