janadhvani

Kannada Online News Paper

ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಸೆಟ್ಸ್ – 19 ಕ್ಯಾಂಪ್

ಉಡುಪಿ: ಸೆಪ್ಟೆಂಬರ್ 24, ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಸಮಿತಿ ಅಧೀನದಲ್ಲಿ ಶಾಖಾ ಕಾರ್ಯಕರ್ತರು, ಸೆಕ್ಟರ್, ಡಿವಿಷನ್, ಜಿಲ್ಲಾ ನಾಯಕರಿಗೆ “ಸೆಟ್ಸ್ – 19” ಎಂಬ ದ್ವಿದಿನ ಕ್ಯಾಂಪ್ ಇತ್ತೀಚೆಗೆ ರಹ್ಮಾನಿಯ ಜುಮುಅ ಮಸ್ಜಿದ್ ದೊಡ್ಡಣಗುಡ್ಡೆ ವಠಾರದಲ್ಲಿ ನಡೆಯಿತು.
ಎಸ್.ವೈ.ಎಸ್. ಉಡುಪಿ ಜಿಲ್ಲಾಧ್ಯಕ್ಷ ಅಸ್ಸಯ್ಯಿದ್ ಜಅ್’ಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ದುಆಃ ಆಶೀರ್ವಚನದೊಂದಿಗೆ ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮವನ್ನು ದೊಡ್ಡಣಗುಡ್ಡೆ ಮಸ್ಜಿದ್ ಖತೀಬ್ ಮುಸ್ತಫ ಸಖಾಫಿ ಸಭೆಯ ಉಧ್ಘಾಟನೆಗೈದರು. ಕ್ಯಾಂಪ್ ನಿರ್ವಹಣಾ ಸಮಿತಿ ಚಯರ್’ಮ್ಯಾನ್ ಅಶ್ರಫ್ ಮುಸ್ಲಿಯಾರ್ ಹಂಗಳೂರು ಅಧ್ಯಕ್ಷತೆ ವಹಿಸಿದ್ದರು.


ಸಂಘಟನಾ ಕಾರ್ಯಾಚರಣೆ, ಕಾರ್ಯಕರ್ತನ ದಿನಚರಿ, ಮುಂದಿನ ಸವಾಲುಗಳು, ಭೋದನೆ ಶೈಲಿ, ಎಲೆಕ್ಷನ್ ವರ್ಕ್’ಶಾಫ್, ಚರ್ಚಾಗೋಷ್ಠಿ, ಅಂತರ್ಜಾಲ ಸದುಪಯೋಗ, ನಾಯಕತ್ವ – ಇತ್ಯಾದಿ ಪ್ರಮುಖ ವಿಷಯವನ್ನಾಧರಿಸಿ ಡಾ|| ಸಿರಾಜುದ್ದೀನ್ ಮಾಸ್ಟರ್ ಕಣ್ಣೂರು ಕೇರಳ, ಅಹ್ಮದ್ ಶರೀಫ್ ಸಖಾಫಿ ಕಿಲ್ಲೂರು, ಕೆ.ಎಂ. ಮುಸ್ತಫ ಹಿಮಮಿ ಸಖಾಫಿ ಮೊಂಟುಗೋಳಿ, ಹಾಫಿಳ್ ಯಹ್’ಕೂಬ್ ಸಅದಿ ನಾವೂರು, ಶಾಹುಲ್ ಹಮೀದ್ ಮುಸ್ಲಿಯಾರ್ ಶಿವಮೊಗ್ಗ, ಜಿ.ಎಂ. ಸಿರಾಜುದ್ದೀನ್ ಸಖಾಫಿ ಕನ್ನಂಗಾರ್, ಅಬ್ದುರ್ರವೂಫ್ ಮೂಡುಗೋಪಾಡಿ ತರಗತಿ ಮಂಡಿಸಿದರು.
ದೊಡ್ಡಣಗುಡ್ಡೆ ಮಸ್ಜಿದ್ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್, ಯಂಗ್’ಮೆನ್ಸ್ ಅಧ್ಯಕ್ಷ ರಫೀಕ್ ದೊಡ್ಡಣಗುಡ್ಡೆ, ಎಸ್ಸೆಸ್ಸೆಫ್ ಇಹ್ಸಾನ್ ಕರ್ನಾಟಕ ಜನರಲ್ ಕನ್ವೀನರ್ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಎಸ್ಸೆಸ್ಸೆಫ್ ರಾಜ್ಯ ಪ್ರ.ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ, ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಕೆ.ಎಚ್. ಕೊಂಬಾಳಿ ಝುಹ್ರಿ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಪಿ.ಎಂ.ಎ. ಅಶ್ರಫ್ ರಝಾ ಅಂಜದಿ ಸಮಾರೋಪ ಸಮಾರಂಭ ಅಧ್ಯಕ್ಷತೆ ವಹಿಸಿ, ನಿರ್ವಹಣಾ ಸಮಿತಿ ಕನ್ವೀನರ್ ಮುಹಮ್ಮದ್ ರಕೀಬ್ ಕನ್ನಂಗಾರ್ ಸ್ವಾಗತಿಸಿದರು. ಜಿಲ್ಲಾ ಪ್ರ.ಕಾರ್ಯದರ್ಶಿ ಎನ್.ಸಿ. ರಹೀಂ ದನ್ಯವಾದ ಸಲ್ಲಿಸಿದರು.

✍🏼 _ವರದಿ:- SSF Media Cell, Udupi District_

ಪ್ರಕಟಣೆ- PMS Padubidri

error: Content is protected !! Not allowed copy content from janadhvani.com