ವಿಟ್ಲ : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ SYS ಕೊಡಂಗಾಯಿ ಬ್ರಾಂಚ್ ಇದರ ಫಸ್ಟ್ ಅಸೆಂಬ್ಲಿ (ಪ್ರಥಮ ವಾರ್ಷಿಕ)ಯು ಸೆಪ್ಟೆಂಬರ್ 20ರಂದು ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಇಶಾ ನಮಾಜಿನ ಬಳಿಕ ಇಲ್ಲಿನ ಸುನ್ನೀ ಸೆಂಟರ್ ನಲ್ಲಿ ನಡೆಯಲಿದೆ.
ಸುನ್ನೀ ಜಂಇಯ್ಯತುಲ್ ಉಲಮಾ ದ.ಕ ಜಿಲ್ಲಾ ಉಪಾಧ್ಯಕ್ಷರಾದ ಶೈಖುನಾ ಮಹ್ಮೂದುಲ್ ಫೈಝಿ ಓಲೆಮುಂಡೋವುರವರ ದುಆದೊಂದಿಗೆ ಆರಂಭ ವಾಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಾಂಚ್ ಸಮಿತಿ ಅಧ್ಯಕ್ಷರಾದ ಪಿ ಹುಸೈನ್ ಜಾರರವರು ವಹಿಸಲಿರುವರು.ಸುನ್ನೀ ಸೆಂಟರ್ ಅಧ್ಯಕ್ಷರಾದ ಕೆಎ ಹಮೀದ್ ಹಾಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಅಧ್ಯಕ್ಷರಾದ ಬಹು ಪಿಕೆ ಅಬೂಬಕರ್ ಉಸ್ತಾದ್ ರವರು ಮಹ್’ಳರ ಮಜ್ಲಿಸಿಗೆ ನಾಯಕತ್ವ ನೀಡಲಿರುವರು.